ಬಿಲ್‌ ಕಟ್ಟದೇ ಯುಎಇ ವ್ಯಕ್ತಿ ಪರಾರಿ !  ➤   23 ಲಕ್ಷ ರೂ. ವಂಚನೆ

(ನ್ಯೂಸ್ ಕಡಬ)newskadab.com  ಹೊಸದಿಲ್ಲಿ, ಜ.18. ಅಬುದಾಬಿ ರಾಜ ಮನೆತನದ ಸಿಬ್ಬಂದಿ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ದಿಲ್ಲಿಯ ಪ್ರತಿಷ್ಠಿತ ಲೀಲಾ ಪ್ಯಾಲೇಸ್‌ ಹೋಟೆಲ್‌ಗೆ 23 ಲಕ್ಷ ರೂ. ಬಿಲ್‌ ಪಾವತಿಸದೇ ವಂಚಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ


ಯುಎಇ ಸುಲ್ತಾನ ಶೇಖ್‌ ಫಲ್ಹಾ ಬಿನ್‌ ಜಾಯೇದ್‌ ಅಲ್‌ ನಹ್ಯಾನ್‌ ಅವರ ಕಚೇರಿಯ ಅಧಿಕಾರಿ ಎಂದು ಹೇಳಿಕೊಂಡು ಮೊಹಮ್ಮದ್‌ ಷರೀಫ್‌ ಹೋಟೆಲ್‌ನ 427 ರೂಮ್‌ಗೆ ಚೆಕ್‌ ಇನ್‌ ಆಗಿದ್ದ. ಎಲ್ಲಾ ಐಷಾರಾಮಿ ಸವಲತ್ತುಗಳ ಮಜಾ ಉಡಾಯಿಸಿ ಬಿಲ್‌ ಕಟ್ಟದೇ ಮಂಗಮಾಯವಾಗಿದ್ದಾನೆ ಎನ್ನಲಾಗಿದೆ.

Scroll to Top