ಜೂನಿಯರ್ ಅಥ್ಲೆಟಿಕ್ ಮೀಟ್ ಡಿಸ್ಕಸ್ ಥ್ರೋ ► ಕಡಬದ ಸೈಂಟ್ ಆನ್ಸ್ ಶಾಲೆಯ ಗುರುಕಿರಣ್ ಗೆ ಕಂಚು

(ನ್ಯೂಸ್ ಕಡಬ) newskadaba.com ಕಡಬ, ಡಿ.15. ಜೂನಿಯರ್ ಅಥ್ಲೆಟಿಕ್ ಮೀಟ್ ನ ಡಿಸ್ಕಸ್ ಥ್ರೋದಲ್ಲಿ ಕಡಬದ ಸೈಂಟ್ ಆನ್ಸ್‌ ಆಂಗ್ಲಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಗುರುಕಿರಣ್ ಕಂಚಿನ ಪದಕ ಪಡೆದಿರುತ್ತಾರೆ.

ಇತ್ತೀಚೆಗೆ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ದಕ್ಷಿಣ ಕನ್ನಡ ಅಥ್ಲೆಟಿಕ್ ಅಸೋಶಿಯೇಶನ್ ಸಾರಥ್ಯದಲ್ಲಿ ದಕ್ಷಿಣ ಕನ್ನಡ, ಉಡುಪಿ, ಶ್ರೀಲಂಕಾ ಅತಿಥಿ ಕ್ರೀಡಾಪಟುಗಳನ್ನೊಳಗೊಂಡ ಜೂನಿಯರ್ ಅಥ್ಲೆಟಿಕ್ ಮೀಟ್ ಡಿಸ್ಕಸ್ ಥ್ರೋ ದಲ್ಲಿ ಗುರುಕಿರಣ್ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.

Scroll to Top