3 ಬೈಕ್‌ನಲ್ಲಿ 14 ಮಂದಿಯ ಸ್ಟಂಟ್‌   ➤  ಯುವಕರು ಅರೆಸ್ಟ್..!!  

(ನ್ಯೂಸ್ ಕಡಬ) newskadaba.com ಲಕ್ನೋ, ಜ.11.  ಬೈಕ್‌ ನಲ್ಲಿ ಸಾಹಸಮಯ ಸ್ಟಂಟ್‌ ಗಳ ಹುಚ್ಚಾಟ ಮೆರೆದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಯುವಕರನ್ನು ಪೊಲೀಸರ ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ಬಳಿ ವರದಿಯಾಗಿದೆ.

ಒಂದು ಬೈಕ್‌ ನಲ್ಲಿ 6 ಜನ, ಇನ್ನೆರೆಡು ಬೈಕ್‌ ನಲ್ಲಿ 4 ಜನ ಕಿರುಚುತ್ತಾ ಜಾಲಿ ಮಾಡುತ್ತಾ ಸಂಚರಿಸುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಬರೇಲಿಯ ಡಿಯೋರಾನಿಯಾ ಪೊಲೀಸ್‌ ಠಾಣಾ ವ್ಯಾಪ್ತಿಯ ಪೊಲೀಸರು ವೈರಲ್‌ ಆದ ವಿಡಿಯೋವನ್ನು ಪರಿಶೀಲಿಸಿ ಬೈಕ್‌ ಗಳನ್ನು ಜಪ್ತಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Scroll to Top