ಹಾವು ಕೊಂದ ವ್ಯಕ್ತಿ ವಿರುದ್ಧ FIR ದಾಖಲು

(ನ್ಯೂಸ್ ಕಡಬ) newskadaba.com ಬಾಗಪತ್, ಜ.10.  ಗ್ರಾಮವೊಂದರಲ್ಲಿ ಹಾವನ್ನು ಕೊಂದ ಆರೋಪದ ಮೇಲೆ ವ್ಯಕ್ತಿಯೊಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿರುವ ಘಟನೆ ಬಾಗಪತ್ ನಲ್ಲಿ ವರದಿಯಾಗಿದೆ.

ಆರೋಪಿಯನ್ನು ಸ್ವಾಲಿನ್ ಎಂದು ಗುರುತಿಸಲಾಗಿದೆ.

ಆರೋಪಿ ಸ್ವಾಲಿನ್ ಪರಾರಿಯಾಗಿದ್ದು, ಹಾವನ್ನು ಕೊಂದ ಆರೋಪದ ಮೇಲೆ ಸ್ವಾಲಿನ್ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ವಿಭಾಗೀಯ ಅರಣ್ಯಾಧಿಕಾರಿ ಹೇಮಂತ್ ಕುಮಾರ್  ತಿಳಿಸಿದ್ದಾರೆ. ಗ್ರಾಮದ ರಾಮ್ ಶರಣ್ ಎಂಬುವವರ ಮನೆಯಿಂದ ಹಾವು ಹೊರಬಂದ ನಂತರ ಜನಸಾಗರವೇ ಜಮಾಯಿಸಿತ್ತು. ಗ್ರಾಮಸ್ಥರ ಮಾತಿನಂತೆ ಸ್ವಾಲಿನ್ ಅಲ್ಲಿಗೆ ಬಂದು ಹಾವನ್ನು ಕೊಂದಿದ್ದಾರೆ ಎನ್ನಲಾಗಿದೆ.

Scroll to Top