ಅತ್ಯಾಚಾರ ಆರೋಪದಡಿ ಮಹಿಳೆಗೆ ಗುಂಡೇಟು ➤ ಬಾಲಕಿ ಅರೆಸ್ಟ್

 (ನ್ಯೂಸ್ ಕಡಬ) newskadaba.com ದೆಹಲಿ , ಜ.08. 50 ವರ್ಷದ ಮಹಿಳೆ ಮೇಲೆ ಗುಂಡು ಹಾರಿಸಿದ ಆರೋಪದ ಮೇಲೆ ಬಾಲಕಿಯೊಬ್ಬಳನ್ನು ಪೊಲೀಸರು ಬಂಧಿಸಿರುವ ಘಟನೆ ಈಶಾನ್ಯ ದೆಹಲಿಯ ಘೋಂಡಾ ಪ್ರದೇಶದ ಬಳಿ ವರದಿಯಾಗಿದೆ.

ಗಾಯಗೊಂಡಿರುವ ಮಹಿಳೆಯನ್ನು ಖುರ್ಷಿದಾ ಎಂದು ಗುರುತಿಸಲಾಗಿದೆ. ಇವರು ಜಿಟಿಬಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇವರ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುಂಡೇಟಿಗೆ ಒಳಗಾದ ಘೋಂಡಾದ ಸುಬಾಷ್ ಮೊಹಲ್ಲಾದ ನಿವಾಸಿ ಖುರ್ಷಿದಾ ಅವರ ಮಗನ ವಿರುದ್ಧ ಇದೇ ಬಾಲಕಿ 2021ರಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದಳು ಎಂಬುದು ತಿಳಿದುಬಂದಿದೆ.

Scroll to Top