ಸ್ಕೂಟರ್ ಗೆ ಟ್ರಕ್ ಢಿಕ್ಕಿ ➤ ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com, ಕೋಲ್ಕತ್ತಾ, ಜ. 06. ಕಾರು ಹಾಗೂ ಟ್ರಕ್ ದ್ವಿಚಕ್ರ ವಾಹನದ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ವಾಹನ ಸವಾರರು ಟ್ರಕ್ ಗೆ ಸಿಲುಕಿ ಹಲವು ಕಿ.ಮೀ ದೂರದ ವರೆಗೆ ಎಳೆದೊಯ್ಯಲ್ಪಟ್ಟು ಮೃತಪಟ್ಟ ಘಟನೆ ಕೊಲ್ಕತ್ತಾದಿಂದ ವರದಿಯಾಗಿದೆ.

ಮೃತ ವ್ಯಕ್ತಿಯನ್ನು ಅನಂತ ದಾಸ್ ಎಂದು ಗುರುತಿಸಲಾಗಿದೆ ಈತ ಮನೆಗೆ ತೆರಳುತ್ತಿದ್ದ ವೇಳೆ ಡಂಪರ್ ಟ್ರಕ್ ಢಿಕ್ಕಿ ಹೊಡೆದಿದ್ದು, ಪರಿಣಾಮ ಸ್ಕೂಟರ್ ಟ್ರಕ್ ನ ಬದಿಗೆ ಸಿಲುಕಿಕೊಂಡು ವ್ಯಕ್ತಿಯ ಮೃತದೇಹ 1.5 ಕಿ.ಮೀ ವರೆಗೆ ಎಳೆದೊಯ್ಯಲ್ಪಟ್ಟಿದೆ. ಅಪಘಾತದ ರಭಸಕ್ಕೆ ದ್ವಿಚಕ್ರವಾಹನಕ್ಕೆ ಬೆಂಕಿ ಹೊತ್ತಿಕೊಂಡಿದ್ದು ದೇಹವೂ ಸುಟ್ಟು ಕರಕಲಾಗಿದೆ.

Scroll to Top