ಮೈಸೂರು ರಾಜವಂಶಕ್ಕೆ ಹೊಸ ಕುಡಿ ಆಗಮನ ► ಗಂಡು ಮಗುವಿಗೆ ಜನ್ಮ ನೀಡಿದ ಯುವರಾಜ ಯದುವೀರ್ ಪತ್ನಿ ತ್ರಿಷಿಕಾ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.07. ಮೈಸೂರು ರಾಜವಂಶಕ್ಕೆ ಹೊಸ ಕುಡಿಯೊಂದರ ಆಗಮನವಾಗಿದ್ದು, ಗಂಡು ಮಗು ಹುಟ್ಟಿರುವ ಹಿನ್ನೆಲೆಯಲ್ಲಿ ಯದುವಂಶದಲ್ಲೀಗ ಸಂಭ್ರಮ ಮುಗಿಲು ಮುಟ್ಟಿದೆ.

ಮೈಸೂರು ಯುವರಾಜ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಪತ್ನಿ ತ್ರಿಷಿಕಾ ಬುಧವಾರದಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದರು. ದಂಪತಿಗೆ ಗಂಡು ಮಗು ಜನಿಸಿರುವುದರಿಂದ ಯದು ಕುಟುಂಬದ ಉತ್ತರಾಧಿಕಾರಿ ಕುಡಿ ಬಂದಂತಾಗಿದೆ.

Scroll to Top