ಜಮ್ಮು-ಕಾಶ್ಮೀರದಲ್ಲಿ ಉಗ್ರರು ಹಾಗೂ ಭದ್ರತಾಪಡೆಯ ನಡುವೆ ಗುಂಡಿನ ಚಕಮಕಿ ➤ ಇಬ್ಬರು ಉಗ್ರರು ಹತ

(ನ್ಯೂಸ್ ಕಡಬ) newskadaba.com ಶ್ರೀನಗರ, ಡಿ. 28. ಜಮ್ಮು ಕಾಶ್ಮೀರದ ಸಿದ್ರಾ ಪ್ರದೇಶದಲ್ಲಿ ನಡೆದ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವಿನ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರು ಹತರಾದ ಬಗ್ಗೆ ಬುಧವಾರದಂದು ವರದಿಯಾಗಿದೆ.

ಇಂದು ಮುಂಜಾನೆ ಟ್ರಕ್‌ ವೊಂದು ಸಂಚರಿಸುತ್ತಿದ್ದ ವೇಳೆ ಸಂಶಯ ಬಂದ ಹಿನ್ನೆಲೆ ಪೊಲೀಸರು ಟ್ರಕ್‌ ನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಅದರೊಳಗೆ ಉಗ್ರರು ಅಡಗಿರುವುದು ಪತ್ತೆಯಾಗಿದೆ. ಈ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ತತ್‌ ಕ್ಷಣ ಕಾರ್ಯಪ್ರವೃತ್ತರಾದ ಭದ್ರತಾ ಪಡೆ ಸಿಬಂದಿಯು ಪ್ರತಿದಾಳಿ ನಡೆಸಿ ಕೆಲವು ಸಮಯದವರೆಗೆ ಗುಂಡಿನ ಚಕಮಕಿ ನಡೆದಿದ್ದು, ಮೂವರು ಉಗ್ರರನ್ನು ಎನ್ಕೌಂಟರ್‍ ಮಾಡುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿದ್ದಾರೆ ಎಂದು ಎಡಿಜಿಪಿ ಮುಕೇಶ್‌ ಸಿಂಗ್‌ ತಿಳಿಸಿದ್ದಾರೆ.

Scroll to Top