ಗುಂಡ್ಯ ಸಮೀಪ ದನದ ತಲೆ, ಕಾಲು ಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಡಿ. 08. ಗುಂಡ್ಯ- ಸುಬ್ರಹ್ಮಣ್ಯ ರಸ್ತೆಯ ದೇರಣೆ ಸಮೀಪದ ಕಾಡಿನಲ್ಲಿ ದನದ ತಲೆ ಹಾಗೂ ಕಾಲು ಪತ್ತೆಯಾಗಿದ್ದು, ಶಿರಾಡಿ ಮತ್ತು ಸಿರಿಬಾಗಿಲು ಭಜರಂಗದಳ ಕಾರ್ಯಕರ್ತರು ಇದನ್ನು ಪತ್ತೆ ಹಚ್ಚಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

 

ಇಂತಹ ನೀಚ ಕೃತ್ಯವೆಸಗಿದವರನ್ನು ಪತ್ತೆ ಹಚ್ಚಬೇಕು. ಇಲ್ಲದಿದ್ದಲ್ಲಿ ತೀವ್ರ ಹೋರಾಟ ಮಾಡುವುದಾಗಿ ಕಡಬ ಪ್ರಖಂಡ ವಿ.ಹಿಂ.ಪ. ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ ಹಾಗೂ ಭಜರಂಗದಳ ಕಡಬ ಪ್ರಖಂಡ ಸಂಯೋಜಕ ಮನೋಜ್ ಖಂಡಿಗ ತಿಳಿಸಿದ್ದಾರೆ.

Scroll to Top