ಸಗಣಿ ಗುಂಡಿಗೆ ಬಿದ್ದು ಮಗು ಮೃತ್ಯು

(ನ್ಯೂಸ್ ಕಡಬ) ಹೆಬ್ರಿ, ಡಿ. 07. ಮಗುವೊಂದು ಸೆಗಣಿ ಹೊಂಡಕ್ಕೆ ಬಿದ್ದು ಮೃತಪಟ್ಟ ಘಟನೆ ಹೆಬ್ರಿ ಸಮೀಪದ ಬಚ್ಚಪ್ಪು ಎಂಬಲ್ಲಿ ನಡೆದಿದೆ.

 

ಮೃತ ಮಗುವನ್ನು ಜಾರ್ಖಂಡ್ ಮೂಲದ ಓಕನ್ ಎಂಬವರ ಪುತ್ರ ಮುನೇಶ್ವರ (4) ಎದು ಗುರುತಿಸಲಾಗಿದೆ. ಆಂಟನಿ ಎಂಬವರ ಜಮೀನಿನಲ್ಲಿ ಓಕನ್ ಕೂಲಿ ಕೆಲಸ ಮಾಡುತ್ತಿದ್ದು, ಈ ವೇಳೆ ಜಮೀನಿನಲ್ಲಿ ಆಟವಾಡುತ್ತಿದ್ದ ಮಗು ಆಕಸ್ಮಿಕವಾಗಿ ಸಗಣಿ ಗುಂಡಿಗೆ ಬಿದ್ದು ಈ ದುರ್ಘಟನೆ ಸಂಭವಿಸಿದೆ. ಈ ಸಂಬಂಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Scroll to Top