ಬಿ.ಸಿ.ರೋಡ್: ಸರಣಿ ಅಪಘಾತದೊಂದಿಗೆ ವಿದ್ಯುತ್ ಕಂಬಕ್ಕೆ ಅಪ್ಪಳಿಸಿದ ಡಸ್ಟರ್ ► ಚಾಲಕ ಸ್ಥಳದಲ್ಲೇ

(ನ್ಯೂಸ್ ಕಡಬ) newskadaba.com ಬಂಟ್ವಾಳ, ನ.18. ಚಾಲಕನ ನಿಯಂತ್ರಣ ತಪ್ಪಿದ ಡಸ್ಟರ್ ಕಾರೊಂದು ಎದುರಿನಲ್ಲಿದ್ದ ವಾಹನಗಳಿಗೆ ಗುದ್ದಿಕೊಂಡು ವಿದ್ಯುತ್ ಕಂಬಕ್ಕೆ ಅಪ್ಪಳಿಸಿದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಬಿ.ಸಿ.ರೋಡ್ ನೇತ್ರಾವತಿ ಸೇತುವೆ ಬಳಿ ಶನಿವಾರದಂದು ನಡೆದಿದೆ.

ಮೃತರನ್ನು ನೆಟ್ಲ ಮುಡ್ನೂರು ನಿವಾಸಿ ಮಾಧು ನಾಯ್ಕ ಎಂಬವರ ಪುತ್ರ ರಾಕೇಶ್ ನಾಯ್ಕ(30) ಎಂದು ಗುರುತಿಸಲಾಗಿದೆ. ಅವಿವಾಹಿತರಾಗಿರುವ ಇವರು‌ ನೇರಳಕಟ್ಟೆ ಕೋ – ಅಪರೇಟಿವ್ ಬ್ಯಾಂಕ್ನ ನೌಕರನಾಗಿದ್ದು, ಬಿ.ಸಿ.ರೋಡ್ ನಲ್ಲಿ ಎಸ್ಸಿಡಿಸಿಸಿ ಬ್ಯಾಂಕ್ ಗೆ ಹಣ ತುಂಬಿಸಲೆಂದು ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಎದುರಿನಿಂದ ಸಂಚರಿಸುತ್ತಿದ್ದ ಬೊಲೇರೋ, ಟೊಯೋಟಾ ಎಟಿಯೋಸ್ ಕಾರು ಹಾಗೂ ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದಿದ್ದು, ಬಳಿಕ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಬಡಿದು ಪಕ್ಕದ ಗದ್ದೆಗೆ ಉರುಳಿ ಬಿದ್ದಿದೆ. ಪರಿಣಾಮ ರಾಕೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ವಿಷಯ ತಿಳಿದ ಬಂಟ್ವಾಳ ಟ್ರಾಫಿಕ್ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ‌.

Scroll to Top