ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ನೌಕಾಪಡೆ..!

(ನ್ಯೂಸ್ ಕಡಬ) newskadaba.com ಚೆನ್ನೈ, ಆ. 29. ಭಾರತ- ಶ್ರೀಲಂಕಾ ನಡುವಿನ ಸಮುದ್ರದಲ್ಲಿ ಮೀನು ಹಿಡಿಯಲು ತೆರಳಿದ್ದ ಆರು ಮೀನುಗಾರರನ್ನು ಶ್ರೀಲಂಕಾ ಬಂಧಿಸಿದ್ದು, ಇನ್ನುಳಿದವರನ್ನು ಬೆನ್ನಟ್ಟಿ ಬಂದಿರುವ ಕುರಿತು ರಾಮೇಶ್ವರಂನ ಮೀನುಗಾರರ ಸಂಘವು ಆರೋಪಿಸಿದೆ.

ಮೀನುಗಾರರು ಭಾರತೀಯ ಸಮುದ್ರ ಮಿತಿಯೊಳಗಿದ್ದರೂ ಅವರನ್ನು ಬಂಧಿಸಲಾಗಿದೆ ಎಂದು ಆರೋಪಿಸಿದ ಸಂಘವು, ಕೂಡಲೇ ನಮ್ಮ ಮೀನುಗಾರರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದೆ.

Scroll to Top