ಬೆಳ್ತಂಗಡಿ: ತೋಡಿಗೆ ಜಾರಿಬಿದ್ದು ವ್ಯಕ್ತಿ ಮೃತ್ಯು..!

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜು. 28. ವ್ಯಕ್ತಿಯೋರ್ವರು ಮನೆಯಿಂದ ಅಂಗಡಿಗೆ ಹೋಗಿ ವಾಪಸ್ ಮನೆಗೆ ಬರುವಾಗ ತೋಡಿಗೆ ಜಾರಿಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಇಂದಬೆಟ್ಟು ನಲ್ಲಿ ನಡೆದಿದೆ.

ಮೃತರನ್ನು ಇಂದಬೆಟ್ಟು ಗ್ರಾಮದ ಬರಮೇಲು ನಿವಾಸಿ ಪೂವಪ್ಪ(54) ಎಂದು ಗುರುತಿಸಲಾಗಿದೆ. ಇವರು ಮನೆಯಿಂದ ಸಮೀಪದ ಅಂಗಡಿಗೆ ಹೋಗಿ ಹಿಂತಿರುಗಿ ಮನೆಗೆ ಮನೆಗೆ ಬರುತ್ತಿದ್ದ ವೇಳೆ ಮನೆಯ ತೋಟದಲ್ಲಿನ ತೋಡು ದಾಟುವಾಗ ಕಾಲು ಜಾರಿಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇವರ ಬರುವಿಕೆಯನ್ನು ಕಾದು ಕುಳಿತಿದ್ದ ಮನೆಯವರು ಸಂಜೆಯಾಗಿದ್ದರೂ ವಾಪಸ್ ಬರದೇ ಇದ್ದಾಗ ಹುಡುಕಾಟ ನಡೆಸಿದ್ದು, ಈ ವೇಳೆ ತೋಟದ ತೋಡಿನದಲ್ಲಿ ಬಿದ್ದು ಮೃತಪಟ್ಟಿರುವುದು ಕಂಡು ಬಂದಿದೆ. ಈ ಕುರಿತು ಬೆಳ್ತಂಗಡಿ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Scroll to Top