ಶೋರೂಂ ನಲ್ಲಿ ಬೆಂಕಿ ಅವಘಡ ➤ 7 ಎಲೆಕ್ಟ್ರಿಕ್ ಬೈಕ್ ಗಳು ಸುಟ್ಟು ಭಸ್ಮ..!

(ನ್ಯೂಸ್ ಕಡಬ) newskadaba.com ಮುಂಬೈ, ಜು. 19. ಶೋರೂಂ ನಲ್ಲಿ ಚಾರ್ಜಿಂಗ್ ಮಾಡುತ್ತಿದ್ದ ವೇಳೆ ಏಳು ಎಲೆಕ್ಟ್ರಿಕ್ ಬೈಕ್ ಗಳು ಬೆಂಕಿಗಾಹುತಿಯಾದ ಘಟನೆ ಪುಣೆಯ ಗಂಗಾಧಾಮ್ ಪ್ರದೇಶದಲ್ಲಿ ನಡೆದಿದೆ.

ಎಲೆಕ್ಟ್ರಿಕ್ ಬೈಕ್ ನ್ನು ಶೋ ರೂಮ್‌‌ನಲ್ಲಿ ಚಾರ್ಜಿಂಗ್‌ ಮಾಡುತ್ತಿದ್ದ ವೇಳೆ ಬೈಕ್‌‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಪರಿಣಾಮ 7 ಎಲೆಕ್ಟ್ರಿಕಲ್ ಬೈಕ್‍ಗಳು ಸುಟ್ಟು ಕರಕಲಾಗಿದೆ ಎಂದು ತಿಳಿದುಬಂದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.

Scroll to Top