ಮಹಡಿಯಿಂದ ಕೆಳಗೆಬಿದ್ದು ಯುವಕ ಮೃತ್ಯು..!



(ನ್ಯೂಸ್ ಕಡಬ) newskadaba.com ಕುಂಬಳೆ, ಜೂ. 13. ಮಹಡಿಯಿಂದ ಬಿದ್ದು‌ ಯುವಕನೋರ್ವ ಮೃತಪಟ್ಟ ಘಟನೆ ಕಿಂಬಳೆ ಮಂಡೆಕಾಪು ಎಂಬಲ್ಲಿ ನಡೆದಿದೆ.







 

ಮೃತ ಯುವಕನನ್ನು ಮಂಗಲ್ಪಾಡಿ ಪಂಚಾಯತ್‌ನ ಹೇರೂರು ಕಂಗ್ವೆ ನಿವಾಸಿ, ಐತ್ತಪ್ಪ ಶೆಟ್ಟಿ ಅವರ ಪುತ್ರ ಸಂದೀಪ್‌ ಶೆಟ್ಟಿ (35) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಸಂದೀಪ್, ಕೆಲಸದ ನಿಮಿತ್ತ ಮಂಡೆಕಾಪು ಎಂಬಲ್ಲಿ ಮನೆಯೊಂದರ ಛಾವಣಿಗೆ ಶೀಟ್‌ ಹಾಕಲು ಅಳತೆ ತೆಗೆಯುತ್ತಿದ್ದ ಸಂದರ್ಭ ಮಹಡಿಯಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.






 

error: Content is protected !!
Scroll to Top