ನೆಟ್ಟಣ: ಪಾದಚಾರಿಗೆ ಬೈಕ್ ಢಿಕ್ಕಿ ► ಸವಾರರಿಬ್ಬರು ಸೇರಿ ಮೂವರಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ನ.08. ಬೈಕೊಂದು ಪಾದಚಾರಿಗೆ ಢಿಕ್ಕಿ ಹೊಡೆದ ಪರಿಣಾಮ ಮೂವರು ಗಾಯಗೊಂಡ ಘಟನೆ ನೆಟ್ಟಣ ಸಮೀಪದ ನೆಲ್ಲಿಕಟ್ಟೆ ಎಂಬಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.

ಘಟನೆಯಲ್ಲಿ ಪಾದಚಾರಿ ಕಲ್ಲಾಜೆ 72 ಕಾಲನಿ ನಿವಾಸಿ ಮುತ್ತುವೀರನ್(72), ಬೈಕ್ ಸವಾರ ಬಾಲಸುಬ್ರಹ್ಮಣ್ಯ(36) ಹಿಂಬದಿ ಸವಾರೆ ಮಂಗಳಾದೇವಿ(34) ಗಾಯಗೊಂಡಿದ್ದು, ಕಡಬ ಸಮುದಾಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಪುತ್ತೂರಿನ ಚೇತನಾ‌ ಆಸ್ಪತ್ರೆಗೆ ದಾಖಲಿಸಲಾಗಿದೆ.

Scroll to Top