ಜ. 31ರಿಂದ ಬಜೆಟ್ ಅಧಿವೇಶನ ಪ್ರಾರಂಭ ➤ ಫೆ. 01ರಂದು ಬಜೆಟ್ ಮಂಡನೆ

(ನ್ಯೂಸ್ ಕಡಬ) newskadaba.com ನವೆದೆಹಲಿ, ಜ. 14. ಜ. 31ರಿಂದ ಸಂಸತ್ ನ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರು ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.


ಫೆ.‌ 1ರಂದು ಬಜೆಟ್ ಮಂಡನೆಯಾಗಲಿದ್ದು, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆಯವ್ಯಯ ಪತ್ರ ಮಂಡಿಸಲಿದ್ದಾರೆ. ಸಂಸತ್ತಿನ ಮೊದಲ ಭಾಗವು ಫೆ. 11ರಂದು ಕೊನೆಗೊಳ್ಳಲಿದೆ. ಎರಡನೇ ಭಾಗ ಮಾರ್ಚ್ 14ರಂದು ಆರಂಭಗೊಂಡು ಎ.‌ 08ರಂದು ಕೊನೆಗೊಳ್ಳಲಿದೆ.

Scroll to Top