ಗ್ರೈಂಡರ್ ನಲ್ಲಿ ಅಕ್ರಮ ಚಿನ್ನ ಸಾಗಾಟ ➤ ಆರೋಪಿ ಸಹಿತ ಚಿನ್ನಾಭರಣ ವಶಕ್ಕೆ…!

(ನ್ಯೂಸ್ ಕಡಬ) newskadaba.com ಕಾಸರಗೋಡು, ಜ. 14. ಮಿಕ್ಸರ್ ಗ್ರೈಂಡರ್ ನಲ್ಲಿ ಬಚ್ಚಿಟ್ಟು ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದ ಘಟನೆ ಕಣ್ಣೂರಿನಲ್ಲಿ ನಡೆದಿದೆ.


ಬಂಧಿತನನ್ನು ಕುಂಬಳೆ ಮೊಗ್ರಾಲ್ ಕೆ.ಕೆ ಪುರದ ಮೊಯ್ದಿನ್ ಕುಂಞಿ ಎಂದು ಗುರುತಿಸಲಾಗಿದೆ. ಕಣ್ಣೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಈತನ ತಪಾಸಣೆ ನಡೆಸಿದ ವೇಳೆ ಗ್ರೈಂಡರ್ ನಲ್ಲಿ ಬಚ್ಚಿಡಲಾಗಿದ್ದ ಸುಮಾರು 68 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

 

Scroll to Top