ರೈಲು ಢಿಕ್ಕಿ ಹೊಡೆದು ತಂದೆ -ಮಗಳು ಮೃತ್ಯು..! ➤ ಹಳಿ ದಾಟುತ್ತಿದ್ದ ವೇಳೆ ನಡೆದ ಘಟನೆ

(ನ್ಯೂಸ್ ಕಡಬ) newskadaba.com ಮಲಪ್ಪುರಂ, ಜ. 06. ರೈಲ್ವೇ ಹಳಿ ದಾಟುತ್ತಿದ್ದ ವೇಳೆ ರೈಲಿನಡಿ ಸಿಲುಕಿ ತಂದೆ ಹಾಗೂ ಮಗಳು ಮೃತಪಟ್ಟ ಘಟನೆ ಕೇರಳದ ತಾನೂರು ರೈಲ್ವೇ ಸ್ಟೇಷನ್ ನಲ್ಲಿ ನಡೆದಿದೆ.


ಮೃತರನ್ನು ತಲಕ್ಕಡತೂರಿನ ನಿವಾಸಿ ಆಸೀಸ್(49) ಹಾಗೂ ಅವರ ಪುತ್ರಿ ಅಜ್ವಾ ಮರ್ವಾ(10) ಎಂದು ಗುರುತಿಸಲಾಗಿದೆ. ಇವರಿಬ್ಬರು ರೈಲ್ವೇ ಹಳಿ ದಾಟುತ್ತಿದ್ದ ವೇಳೆ ಮಂಗಳೂರು- ಚೆನ್ನೈ ಎಕ್ಸ್‌ಪ್ರೆಸ್‌ ರೈಲು ಢಿಕ್ಕಿ ಹೊಡೆದಿದ್ದು, ಪರಿಣಾಮ ಇಬ್ಬರೂ ಮೃತಪಟ್ಟಿದ್ದಾರೆ ಎನ್ನಲಾಗಿದೆ.

Scroll to Top