ಇನ್ಸ್ಟಾಗ್ರಾಂ ಪ್ರೇಮಿಗಾಗಿ ಸ್ವೀಡನ್ ನಿಂದ ಬಂದ ಹದಿನಾರರ ಬಾಲಕಿ…



(ನ್ಯೂಸ್ ಕಡಬ) newskadaba.com ಮುಂಬಯಿ, ಡಿ. 13. ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾಗಿ ಅದು ಪ್ರೇಮಕ್ಕೆ ತಿರುಗಿದ್ದು ಬಳಿಕ ಪ್ರಿಯತಮನಿಗಾಗಿ ಹದಿನಾರು ವರ್ಷದ ಬಾಲಕಿಯೋರ್ವಳು ಸ್ವೀಡನ್‌ನಿಂದ ಮುಂಬಯಿಗೆ ಬಂದ ಘಟನೆ ನಡೆದಿದೆ.







 

ಸ್ವೀಡನ್ ನಿಂದ ಮುಂಬಯಿಗೆ ಬಂದಿದ್ದ ಬಾಲಕಿಯನ್ನು ಮುಂಬಯಿ ಪೊಲೀಸರು ಆಕೆಯ ತಂದೆ ತಾಯಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ. 16 ವರ್ಷದ ಬಾಲಕಿಗೆ ಇನ್ಸ್ಟಾಗ್ರಾಂ ಮೂಲಕ ಮುಂಬಯಿಯ 19 ವರ್ಷದ ಬಾಲಕನೊಂದಿಗೆ ಪ್ರೀತಿ ಹುಟ್ಟಿದ್ದಲ್ಲದೇ ಆತನೊಂದಿಗೆ ಲೀವ್ ಇನ್ ರಿಲೇಶನ್‌ಶಿಪ್‌ ಉದ್ದೇಶದಿಂದ ನ.27ರಂದು ಆಕೆ ಪ್ರವಾಸಿ ವೀಸಾ ಮೂಲಕ ಮುಂಬಯಿಗೆ ಬಂದಿದ್ದಾಳೆ. ಇತ್ತ ಅದೇ ದಿನ ಮಗಳು ಕಾಣೆಯಾಗಿರುವ ಕುರಿತು ಆಕೆಯ ಅಪ್ಪ ಅಮ್ಮ ದೂರು ದಾಖಲಿಸಿದ್ದಾರೆ. ಅಲ್ಲದೇ ಪ್ರಿಯಕರನ ಮನೆಗೆ ಬಂದ ಬಾಲಕಿಗೆ ಯುವಕನ ಮನೆಯಲ್ಲಿರಲು ಯುವಕನ ಮನೆಯವರು ಅನುಮತಿ ನೀಡದ ಕಾರಣ, ಆಕೆಯನ್ನು ಯುವಕನ ಸಂಬಂಧಿಕರ ಮನೆಯಲ್ಲಿ ಇರಿಸಲಾಗಿತ್ತು ಎಂದೂ ಹೇಳಲಾಗಿದೆ.






 

 

error: Content is protected !!
Scroll to Top