ಅಂಚೆ ಇಲಾಖೆಯಲ್ಲಿ ನೇಮಕಾತಿ ➤ 60 ಹುದ್ದೆಗಳಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಡಿ. 01. ಅಂಚೆ ಇಲಾಖೆಯಲ್ಲಿ ಸುಮಾರು 60 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪೋಸ್ಟಲ್ ಸರ್ಕಲ್ ನಲ್ಲಿ ಸುಮಾರು 60 ಹುದ್ದೆಗಳ ಭರ್ತಿಗೆ ನೇಮಕಾತಿ ನಡೆಯುತ್ತಿದೆ.


ಮಲ್ಟಿ ಟಾಸ್ಕಿಂಗ್ ಸ್ಟಾಫ್, ಪೋಸ್ಟ್ ಮ್ಯಾನ್, ಸಾರ್ಟಿಂಗ್ ಅಸಿಸ್ಟೆಂಟ್ ಮತ್ತು ಪೋಸ್ಟಲ್ ಅಸಿಸ್ಟೆಂಟ್ ಹುದ್ದೆಗೆ ಅಭ್ಯರ್ಥಿಗಳಿಂದ ಆಫ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನಾಂಕ.

ಹುದ್ದೆಗಳ ವಿವರ:-
ಮಲ್ಟಿ ಟಾಸ್ಕಿಂಗ್ ಸ್ಟಾಫ್– 13 ಹುದ್ದೆಗಳು
ಪೋಸ್ಟ್ ಮ್ಯಾನ್– 5 ಹುದ್ದೆಗಳು
ಸಾರ್ಟಿಂಗ್ ಅಸಿಸ್ಟೆಂಟ್– 11 ಹುದ್ದೆಗಳು
ಪೋಸ್ಟಲ್ ಅಸಿಸ್ಟೆಂಟ್– 31 ಹುದ್ದೆಗಳು

ವಿದ್ಯಾರ್ಹತೆ: 10ನೇ ತರಗತಿ, 12ನೇ ತರಗತಿ
ವಯೋಮಿತಿ: ಕನಿಷ್ಠ 18ರಿಂದ 27 ವರ್ಷ. ನಿಯಮಾನುಸಾರ ವಯೋಮಿತಿ ಸಡಿಲಿಕೆ ಇದೆ.

Also Read  ದತ್ತು ಪುತ್ರಿಗೆ ಸಿಗರೇಟಿನಿಂದ ಸುಟ್ಟು ಕಿರುಕುಳ ➤ ವೈದ್ಯ ದಂಪತಿಗಳಿಬ್ಬರು ಅರೆಸ್ಟ್

ಆಯ್ಕೆ ಪ್ರಕ್ರಿಯೆ: ಅರ್ಹ ಅಭ್ಯರ್ಥಿಗಳಿಂದ ಕಿರುಪಟ್ಟಿ ಮಾಡಿ ನಂತರ ಲಿಖಿತ ಪರೀಕ್ಷೆ ಮತ್ತು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ವೇತನ: ಮಾಸಿಕ 18,000ದಿಂದ 81,000 ರೂ. ಗಳ ವರೆಗೆ ವೇತನ ನೀಡಲಾಗುವುದು.
ಅರ್ಜಿ ಶುಲ್ಕ: 100ರೂ. ಅರ್ಜಿ ಶುಲ್ಕವನ್ನು ಡಿ. 21, 2021ರ ಒಳಗೆ ಪಾವತಿಸಬೇಕು.
ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ ನಲ್ಲಿ ನೀಡಲಾಗಿರುವ ನಿಗದಿತ ಅರ್ಜಿ ನಮೂನೆ ಪಡೆದು ಸೂಕ್ತ ಮಾಹಿತಿ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ, ಕಛೇರಿಗೆ ಡಿ. 31ರ ಒಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿಯನ್ನು ಕಳುಹಿಸುವ ಪ್ಲಾಸ್ಟಿಕ್ ನ ಮೇಲೆ ಹುದ್ದೆಯ ಹೆಸರನ್ನು ನಮೂದಿಸತಕ್ಕದ್ದು.

Also Read  ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗಳಿಗೆ ಅರ್ಜಿ ಆಹ್ವಾನ - ಅರ್ಜಿ ಸಲ್ಲಿಕೆಗೆ ಇಂದು ಕೊನೇ ದಿನಾಂಕ

ಕಛೇರಿ ವಿಳಾಸ:
Assistant Director (Recruitment),
5th Floor, O/O the chief Postmaster General,
Bihar Circle,
Patna- 800001.

error: Content is protected !!
Scroll to Top