ಉದ್ಯಾವರ: ಮೂವರು ವಿದ್ಯಾರ್ಥಿಗಳು ನೀರು ಪಾಲು



(ನ್ಯೂಸ್ ಕಡಬ) newskadaba.com ಮಂಜೇಶ್ವರ, ಜೂ.10. ಸ್ನಾನಕ್ಕೆಂದು ಕೆರೆಗೆ ಇಳಿದಿದ್ದ ಮೂವರು ವಿದ್ಯಾರ್ಥಿಗಳು ನೀರುಪಾಲಾದ ಘಟನೆ ಇಲ್ಲಿನ ಉದ್ಯಾವರ ಬಿ.ಎಸ್ ನಗರ ಎಂಬಲ್ಲಿ ಶನಿವಾರದಂದು ನಡೆದಿದೆ.





ಮೃತ ಬಾಲಕರನ್ನು ಪಿ.ಟಿ. ಮುಹಮ್ಮದ್ ಎಂಬವರ ಪುತ್ರ ಮುಹಮ್ಮದ್ ಶರೀಫ್ (7), ಮುಹಮ್ಮದ್ ಎಂಬವರ ಪುತ್ರ ಅಸ್ಲಂ (8) , ಅಹ್ಮದ್ ಹಸ್ಸನ್ ಕುಂಞಿ ಎಂಬವರ ಪುತ್ರ ಅಬ್ದುಲ್ ಅಫ್ರೀದ್ (12) ಎಂದು ಗುರುತಿಸಲಾಗಿದೆ.






ಶನಿವಾರ ಶಾಲೆ ಬಿಟ್ಟು ಮನೆಯಿಂದ ತೆರಳಿದ ವಿದ್ಯಾರ್ಥಿಗಳು ಇಲ್ಲಿಗೆ ಸಮೀಪದ ಕೆರೆಯೊಂದರಲ್ಲಿ ಸ್ನಾನಕ್ಕಿಳಿದಿದ್ದು ಈ ವೇಳೆ ಮುಳುಗಿ ಮೃತಪಟ್ಟಿರಬಹುದೆನ್ನಲಾಗಿದೆ. ಸಂಜೆಯಾದರೂ ವಿದ್ಯಾರ್ಥಿಗಳು ಮನೆಗೆ ತಲುಪದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದಾಗ ಇಲ್ಲಿಗೆ ಸಮೀಪದ ಕೆರೆಯ ಬಳಿ ಚಪ್ಪಲಿ ಕಂಡು ಬಂದಿದ್ದು, ಸಂಶಯಗೊಂಡ ಸ್ಥಳೀಯರು ಕೆರೆಯಲ್ಲಿ ಶೋಧ ನಡೆಸಿದಾಗ ಮೂವರು ವಿದ್ಯಾರ್ಥಿಗಳ ಮೃತದೇಹ ಕಂಡುಬಂದಿತೆನ್ನಲಾಗಿದೆ.

ಮೂವರು ವಿದ್ಯಾರ್ಥಿಗಳ ಮೃತದೇಹವನ್ನು ನೀರಿನಿಂದ ಮೇಲಕ್ಕೆತ್ತಲಾಗಿದ್ದು, ಮೃತದೇಹವನ್ನು ಮಂಗಲ್ಪಾಡಿ ಸಿ.ಎಚ್.ಸಿ. ಶವಾಗಾರದಲ್ಲಿಡಲಾಗಿದೆ.

error: Content is protected !!
Scroll to Top