ಚೆನ್ನೈ: ಲಾರಿ ಅಪಘಾತ ➤ ಪುತ್ತೂರಿನ ಇಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ಪುತ್ತೂರು, ನ. 20. ಪುತ್ತೂರಿನ ಸರಕು ಸಾಗಾಟದ ಅಶೋಕ್ ಲೇಲ್ಯಾಂಡ್ ಲಾರಿಯೊಂದು ಚೆನ್ನೈನ ಕೃಷ್ಣಗಿರಿ ಸಮೀಪ ಅಪಘಾತಕ್ಕೀಡಾಗಿದ್ದು, ಲಾರಿಯಲ್ಲಿದ್ದ ಇಬ್ಬರು ಗಾಯಗೊಂಡ ಘಟನೆ ನಡೆದಿದೆ.

ಗಾಯಗೊಂಡವರನ್ನು ಚಾಲಕ ಕಬಕ ನಿವಾಸಿ ಮಹಮ್ಮದ್ ಅಜಿನಾಸ್ ಹಾಗೂ ತೌಸೀಫ್ ಎಂದು ಗುರುತಿಸಲಾಗಿದೆ. ಲಾರಿಯಲ್ಲಿ ಸರಕು ತುಂಬಿಸಿಕೊಂಡು ಬರುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆನ್ನಲಾಗಿದೆ.

Scroll to Top