ಭಾರತೀಯ ಮೀನುಗಾರಿಕಾ ದೋಣಿ ಮೇಲೆ ಗುಂಡಿನ ದಾಳಿ ನಡೆಸಿದ ಪಾಕ್ ನೌಕಾಸೇನೆ..! ➤ ಓರ್ವ ಮೃತ್ಯು

(ನ್ಯೂಸ್ ಕಡಬ) newskadaba.com ಇಸ್ಲಾಮಾಬಾದ್, ನ. 08. ಪಾಕಿಸ್ತಾನದ ನೌಕಾ ಸೇನೆಯು ಭಾರತಕ್ಕೆ ಸೇರಿದ ದೋಣಿಯೊಂದರ ಮೇಲೆ ಗುಂಡಿನ ದಾಳಿ ನಡೆಸಿದ ಪರಿಣಾಮ ಓರ್ವ ಮೀನುಗಾರ ಮೃತಪಟ್ಟು, ಮತ್ತೋರ್ವ ಗಾಯಗೊಂಡ ಬಗ್ಗೆ ವರದಿಯಾಗಿದೆ.

ಮೃತಪಟ್ಟ ಮೀನುಗಾರನನ್ನು ಶ್ರೀಧರ್‌ ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ದ್ವಾರಕಾದಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಜರಾತ್‌ನ ದ್ವಾರಕಾ ಸಮುದ್ರ ಪ್ರದೇಶದಲ್ಲಿ ಜಲ್‌ಪರ್ ಹೆಸರಿನ ದೋಣಿಯ ಮೇಲೆ ಪಾಕಿಸ್ತಾನ ನೌಕಾಪಡೆಯು ಗುಂಡಿನ ದಾಳಿ ನಡೆಸಿದೆ ಎನ್ನಲಾಗಿದೆ.

Scroll to Top