ಮೂರು ಅಂತಸ್ತಿನ ಕಟ್ಟಡದಲ್ಲಿ ಹೊತ್ತಿಕೊಂಡ ಬೆಂಕಿ ➤ ಒಂದೇ ಮನೆಯ ನಾಲ್ವರು ಉಸಿರುಗಟ್ಟಿ ಮೃತ್ಯು

(ನ್ಯೂಸ್ ಕಡಬ) Newskadaba.com ದೆಹಲಿ, ಅ. 26. ಮೂರಂತಸ್ತಿನ ಕಟ್ಟಡವೊಂದರಲ್ಲಿ ಬೆಂಕಿ ಹೊತ್ತಿದ ಪರಿಣಾಮ ಒಂದೇ ಕುಟುಂಬದ ನಾಲ್ವರು ಉಸಿರುಗಟ್ಟಿ ಮೃತಪಟ್ಟ ಘಟನೆ ದೆಹಲಿಯ ಹಳೆ ಸೀಮಾಪುರಿ ಎಂಬಲ್ಲಿ ನಡೆದಿದೆ.

ಮೃತಪಟ್ಟವರನ್ನು ಹೌರಿ ಲಾಲ್(59), ಪತ್ನಿ ರೀನಾ ಹಾಗೂ ಮಕ್ಕಳಾದ ಅಶು ಹಾಗೂ ರಾಧಿಕಾ ಎಂದು ಗುರುತಿಸಲಾಗಿದೆ. ಈ ಕಟ್ಟಡದ ಮೂರನೇ ಅಂತಸ್ತಿನಲ್ಲಿ ಮುಂಜಾನೆ ವೇಳೆಗೆ ಬೆಂಕಿ‌ ಹೊತ್ತಿಕೊಂಡಿದ್ದು, ಪರಿಣಾಮ ನಾಲ್ವರು ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

Scroll to Top