ಪಣಂಬೂರು: ಬೀಚ್ ಗೆ ತೆರಳಿ ಹಿಂತಿರುಗಿದಾಗ ಆಘಾತ ► ಕಾರಿನಲ್ಲಿಟ್ಟಿದ್ದ ಬ್ಯಾಗ್ ನಿಂದ ಸೊತ್ತು ಕಳವು

(ನ್ಯೂಸ್ ಕಡಬ) newskadaba.com ಮಂಗಳೂರು, ಅ.26. ಬೀಚ್ ಗೆ ವಿಹಾರಕ್ಕೆಂದು ತೆರಳುವಾಗ ಕೈಯಲ್ಲಿದ್ದ ಬ್ಯಾಗನ್ನು ಕಾರಿನಲ್ಲಿಟ್ಟಿದ್ದ ಕುಟುಂಬವೊಂದಕ್ಕೆ ಹಿಂತಿರುಗಿದಾಗ ಆಘಾತ ಉಂಟಾದ ಘಟನೆ ಪಣಂಬೂರು ಬೀಚ್ ನಲ್ಲಿ ಬುಧವಾರ ಸಂಜೆ ನಡೆದಿದೆ.

ಮಂಗಳೂರಿನ ಶಾಂತಾ ಎಂಬವರು ತನ್ನ ಕುಟುಂಬ ಸದಸ್ಯರ ಜೊತೆ ಪಣಂಬೂರು ಬೀಚ್ ಗೆ ತೆರಳಿದ್ದು, ವಿಹಾರಕ್ಕೆಂದು ತೆರಳುವಾಗ ಕಾರನ್ನು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ ಕೈಯಲ್ಲಿದ್ದ ಬ್ಯಾಗನ್ನು ಕಾರಿನಲ್ಲಿರಿಸಿ ಹೋಗಿದ್ದರು. ಹಿಂತಿರುಗಿ ಬರುವಾಗ ಜಾರಿನ ಗ್ಲಾಸನ್ನು ಸರಿಸಿ ಬ್ಯಾಗ್ ನಲ್ಲಿದ್ದ ಚಿನ್ನಾಭರಣ, 4 ಸಾವಿರ ರೂ. ನಗದು, ಎಟಿಎಂ ಕಾರ್ಡನ್ನು ಕಳ್ಳರು ದೋಚಿದ್ದಾರೆ. ಕಳವಾದ ಸೊತ್ತುಗಳ ಮೌಲ್ಯ ಸುಮಾರು 45 ಸಾವಿರ ರೂ.ಗಳೆಂದು ಅಂದಾಜಿಸಲಾಗಿದೆ. ಈ ಬಗ್ಗೆ ಶಾಂತಾ ಅವರು ಪಣಂಬೂರು ಠಾಣೆಗೆ ದೂರು ನೀಡಿದ್ದಾರೆ.

Scroll to Top