(ನ್ಯೂಸ್ ಕಡಬ) newskadaba.com ನವದೆಹಲಿ, ಜೂ.13. ಸಾರಿಗೆ ಇಲಾಖೆಯಲ್ಲಿ ಮಹತ್ವದ ಬದಲಾವಣೆ ಘೋಷಿಸಿರುವ ಕೇಂದ್ರ ಸರಕಾರವು ಜುಲೈ 01 ರಿಂದ ಚಾಲನಾ ಪರವಾನಗಿ ನೀಡುವ ಅಧಿಕಾರವನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಿದೆ.
ಇದರಿಂದಾಗಿ ಆರ್ಟಿಓ ಕಛೇರಿಗೆ ಡ್ರೈವಿಂಗ್ ಲೈಸೆನ್ಸ್ ಗಾಗಿ ಸಾರ್ವಜನಿಕರು ಪರದಾಡುವುದಕ್ಕೆ ಬ್ರೇಕ್ ಬಿದ್ದಿದ್ದು, ಖಾಸಗಿ ಸಂಸ್ಥೆಗಳೇ ಡ್ರೈವಿಂಗ್ ಲೈಸೆನ್ಸ್ ಒದಗಿಸಲಿದೆ. ಹೊಸ ನೀತಿಯನ್ವಯ ಚಾಲನಾ ಪರವಾನಗಿಗೆ ಆರ್ಟಿಓ ಕಚೇರಿಗೆ ಹೋಗಿ ಟೆಸ್ಟ್ ಕೊಡಬೇಕಾಗಿಲ್ಲ. ಖಾಸಗಿ ಸಂಸ್ಥೆಯಲ್ಲಿನ ಡಿಜಿಟಲ್ ಯಂತ್ರದ ಮೂಲಕ ಟೆಸ್ಟ್ ನಡೆದು ಲೈಸೆನ್ಸ್ ಸಿಗಲಿದೆ. ಎಲ್ಲಾ ಪ್ರಕ್ರಿಯೆಯು ರೆಕಾರ್ಡ್ ಆಗುವ ಕಾರಣ ಅಡ್ಡದಾರಿಯ ಮೂಲಕ ಲೈಸೆನ್ಸ್ ಪಡೆಯುವುದಕ್ಕೆ ಕಡಿವಾಣ ಬೀಳಲಿದೆ.