ಬಿಜೆಪಿಗೆ ಮುಜುಗರ ತಂದ ರಾಷ್ಟ್ರಪತಿಯವರ ಹೇಳಿಕೆ ► ಟಿಪ್ಪು ಕ್ಷಿಪಣಿ ತಂತ್ರಜ್ಞಾನದ ಜನಕ ಎಂದು ಹಾಡಿ ಹೊಗಳಿದ ರಾಷ್ಟ್ರಪತಿ ಕೋವಿಂದ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.25. ಟಿಪ್ಪು ಕ್ಷಿಪಣಿ ತಂತ್ರಜ್ಞಾನದ ಜನಕನಾಗಿದ್ದು, ಬ್ರಿಟಿಷರ ವಿರುದ್ಧ ಹೋರಾಡಿ ವೀರ ಮರಣವನ್ನಪ್ಪಿದ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟಿಪ್ಪು ಸುಲ್ತಾನನನ್ನು ಹಾಡಿ ಹೊಗಳಿದ್ದು, ಬಿಜೆಪಿಗೆ ತೀವ್ರ ಮುಜುಗರವನ್ನುಂಟುಮಾಡಿದೆ.

ವಿಧಾನಸೌಧದ ವಜ್ರಮಹೋತ್ಸವದ ವಿಶೇಷ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ತನ್ನ ಭಾಷಣದಲ್ಲಿ ಟಿಪ್ಪುಸುಲ್ತಾನ್ ಬಗ್ಗೆ ಉಲ್ಲೇಖಿಸಿ ಟಿಪ್ಪು ಕ್ಷಿಪಣಿ ತಂತ್ರಜ್ಞಾನದ ಜನಕನಾಗಿದ್ದು, ಬ್ರಿಟಿಷರ ವಿರುದ್ಧ ಹೋರಾಡಿ ವೀರ ಮರಣವನ್ನಪ್ಪಿದ ಎಂದರು. ಇದಕ್ಕೆ ಕಾಂಗ್ರೆಸ್ ಶಾಸಕರು ಮೇಜುಕುಟ್ಟಿ ಸ್ವಾಗತಿಸಿದರೆ, ಬಿಜೆಪಿ ಶಾಸಕರು ತೀವ್ರ ಮುಜುಗರ ಅನುಭವಿಸಿದರು. ವಜ್ರಮಹೋತ್ಸವದ ಈ ದಿನ ಭಾರತ ಪ್ರಜಾಪ್ರಭುತ್ವದಲ್ಲಿ ಮರೆಯಲಾಗದ ದಿನ. ಪಾರ್ಲಿಮೆಂಟ್ ಡೆಮಾಕ್ರಸಿ ಇತಿಹಾಸದಲ್ಲಿ ಇದೊಂದು ಮಹತ್ವದ ದಿನವಾಗಿದ್ದು, 14ನೇ ರಾಷ್ಟ್ರಪತಿಯಾಗಿ ಇಂಥಹ ಮಹತ್ವದ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದೇನೆ. ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಕರ್ನಾಟಕಕ್ಕೆ ಮೊದಲ ಸಲ ಭೇಟಿ ನೀಡುತ್ತಿದ್ದೇನೆ ಎಂದರು.

Also Read  ಬಾಂಬ್ ಪತ್ತೆದಳದ ಸಿಪಾಯಿ 'ರ್‍ಯಾಂಬೊ' ಇನ್ನಿಲ್ಲ! ➤ ಕರ್ತವ್ಯದಲ್ಲಿರುವಾಗಲೇ ಪ್ರಾಣಬಿಟ್ಟ 'ರ‍್ಯಾಂಬೋ'

ರಾಜ್ಯ ಸರಕಾರ ಆಚರಿಸಲು ಉದ್ದೇಶಿಸಿರುವ ಟಿಪ್ಪು ಜಯಂತಿಯನ್ನು ತೀವ್ರವಾಗಿ ಎದುರಿಸುತ್ತಿರುವ ಬಿಜೆಪಿಗೆ ರಾಷ್ಟ್ರಪತಿಯವರ ಈ ಹೇಳಿಕೆಯು ಮುಜುಗರ ತಂದಿದೆಯೆನ್ನಲಾಗಿದೆ.

error: Content is protected !!
Scroll to Top