ಕೊರೋನಾ ಬಿಕ್ಕಟ್ಟಿನ ನಡುವೆಯೂ ಇಂದಿನಿಂದ (ಎ. 09) ಐಪಿಎಲ್ ಆರಂಭ ➤ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ನಡುವೆ ಮೊದಲ ಪಂದ್ಯಾಟ

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಎ. 09. ದಿನದಿಂದ ದಿನಕ್ಕೆ ಕೋವಿಡ್ ಹಾವಳಿ ಹೆಚ್ಚುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಿರ್ಬಂಧಗಳ ನಡುವೆಯೂ ಈ ಬಾರಿಯ ಐಪಿಎಲ್‌ ಇಂದಿನಿಂದ ಆರಂಭವಾಗಲಿದೆ.

ಎಲ್ಲ ರೀತಿಯ ಸವಾಲುಗಳ ನಡುವೆಯೂ ಬಿಸಿಸಿಐ ಎ. 9ರಿಂದ ಮೇ 30ರ ವರೆಗೆ ಐಪಿಎಲ್ ಕೂಟವನ್ನು ನಡೆಸಲಿದೆ. ಇದರ ಉದ್ಘಾಟನೆಯು ಇಂದು ಚೆನ್ನೈಯಲ್ಲಿ ಮುಂಬೈ ಇಂಡಿಯನ್ಸ್‌ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ನಡುವೆ ನಡೆಯಲಿದ್ದು, ಮೇ 30ರಂದು ಅಹಮದಾಬಾದ್‌ನ ವಿಶ್ವದ ಬೃಹತ್‌ ಕ್ರಿಕೆಟ್‌ ಮೈದಾನದಲ್ಲಿ ಫೈನಲ್‌ ಪಂದ್ಯಾಟ ನಡೆಯಲಿದೆ. ಕೋವಿಡ್ ಕಾರಣದಿಂದಾಗಿ ಈ ಬಾರಿಯ ಐಪಿಎಲ್ ವೀಕ್ಷಣೆಗೆ ಪ್ರೇಕ್ಷಕರಿಗೆ ಅವಕಾಶವಿಲ್ಲ ಎಂದು ಬಿಸಿಸಿಐ ಹೇಳಿದೆ

Also Read  13 ಲಕ್ಷ ರೂ. ಖರ್ಚು ಮಾಡಿ ನಾಯಿಯಾದ ಮಾನವ

error: Content is protected !!
Scroll to Top