ಮಂಗಳೂರು: ಬಸ್ ನಿರ್ವಾಹಕನಿಗೆ ಚೂರಿ ಇರಿತ ➤ ಗಂಭೀರ ಗಾಯ

(ನ್ಯೂಸ್ ಕಡಬ) newskadaba.com ಸುರತ್ಕಲ್, ಜ. 28. ಬಸ್ ನಿರ್ವಾಹಕನೊಬ್ಬನಿಗೆ ದುಷ್ಕರ್ಮಿಗಳ ತಂಡವೊಂದು ಚೂರಿಯಿಂದ ಇರಿದು ಗಾಯಗೊಳಿಸಿದ ಘಟನೆ ನಗರದ ಸುರತ್ಕಲ್ ಬಳಿಯ ಕಾಟಿಪಳ್ಳ ಸಮೀಪ ಬುಧವಾರದಂದು ತಡರಾತ್ರಿ ನಡೆದಿದೆ.

ಗಾಯಾಳುವನ್ನು ಕೃಷ್ಣಾಪುರ ನಿವಾಸಿ ಜಾಬಿರ್ (20) ಎಂದು ಗುರುತಿಸಲಾಗಿದೆ. ಬೈಕ್ ಗಳಲ್ಲಿ ಬಂದ ಮೂವರು ದುಷ್ಕರ್ಮಿಗಳಿಂದ ಈ ಕೃತ್ಯ ಎಸಗಲಾಗಿದ್ದು, ಪರಿಣಾಮ ಜಾಬಿರ್ ಗಂಭೀರ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದಾಗಿ ಸುರತ್ಕಲ್, ಕೃಷ್ಣಾಪುರ, ಕಾಟಿಪಳ್ಳ ಹಾಗೂ ಕೈಕಂಬ ಪರಿಸರದಲ್ಲಿ ಬಿಗಿಬಂದೋಬಸ್ತ್ ಮಾಡಲಾಗಿದೆ. ಸ್ಥಳಕ್ಕಾಗಮಿಸಿದ ಪೊಲೀಸ್ ಪರಿಶೀಲನೆ ನಡೆಸಿದ್ದಾರೆ.

Scroll to Top