ಬಹಿರ್ದೆಸೆಗೆಂದು ಹೋದ ವ್ಯಕ್ತಿಯ ಮೇಲೆ ಹೆಜ್ಜೇನು ದಾಳಿ ➤ ತೀವ್ರ ಅಸ್ವಸ್ಥ

(ನ್ಯೂಸ್ ಕಡಬ) newskadaba.com ಹನೂರು, ಜ. 18. ಬಹಿರ್ದೆಸೆಗೆಂದು ತೆರಳಿದ್ದ ವ್ಯಕ್ತಿಯ ಮೇಲೆ ಹೆಜ್ಜೇನು ದಾಳಿ ನಡೆಸಿದ ಪರಿಣಾಮ ತೀವ್ರ ಅಸ್ವಸ್ಥಗೊಂಡ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಬಂಡಳ್ಳಿ ಗ್ರಾಮದಲ್ಲಿ ನಡೆದಿದೆ.


ದಾಳಿಗೊಳಗಾದ ವ್ಯಕ್ತಿಯನ್ನು ಚನ್ನಶೆಟ್ಟಿ(60) ಎಂದು ಹೇಳಲಾಗಿದೆ. ಇವರು ಇಂದು ಬೆಳಗ್ಗೆ ಬಹಿರ್ದೆಸೆಗೆಂದು ತೆರಳಿದ ವೇಳೆ ಹಜ್ಜೇನು ದಾಳಿ ನಡೆಸಿದ ಪರಿಣಾಮ ತೀವ್ರ ಅಸ್ವಸ್ಥರಾಗಿದ್ದರು. ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Scroll to Top