ಕಾಸರಗೋಡು: ಗುಂಡು ಹಾರಾಟ ಹಾಗೂ ಕೊಲೆ ಯತ್ನ ಹಿನ್ನೆಲೆ ➤ ಆರೋಪಿಗಳನ್ನು ಹಿಡಿಯಲೆತ್ನಿಸಿದ ಪೊಲೀಸ್ ಜೀಪಿಗೆ ಢಿಕ್ಕಿ ಹೊಡೆದು ಪರಾರಿಯಾದ ಕಿರಾತಕರು



(ನ್ಯೂಸ್ ಕಡಬ) newskadaba.com ಕಾಸರಗೋಡು, ನ. 04. ಆರೋಪಿಗಳನ್ನು ಹಿಡಿಯಲೆತ್ನಿಸಿದ ಪೊಲೀಸ್‌ ಜೀಪಿಗೆ ಕಾರು ಢಿಕ್ಕಿ ಹೊಡೆಸಿ ಪರಾರಿಯಾದ ಘಟನೆ ಮಂಜೇಶ್ವರ ಸಮೀಪದ ಕೊಡ್ಲಮೊಗರು ಎಂಬಲ್ಲಿ ನಡೆದಿದೆ.





ಇತ್ತೀಚೆಗೆ ಬಂದ್ಯೋಡು ಎಂಬಲ್ಲಿ ನಡೆದ ಗುಂಡು ಹಾರಾಟ ಹಾಗೂ ಕೊಲೆಗೆ ಯತ್ನಿಸಿದ್ದ ಆರೋಪಿಗಳಾದ ಮೊಯಿದಿನ್ ಶಬೀರ್ ಹಾಗೂ ತಂಡವು ಕಾರಿನಲ್ಲಿ ತೆರಳುತ್ತಿದ್ದ ವೇಳೆ, ಕಾಸರಗೋಡು ಡಿವೈಎಸ್‌ಪಿ ನೇತೃತ್ವದ ಪೊಲೀಸರು ಕಾರನ್ನು ತಡೆದರೂ, ಆರೋಪಿಗಳು ಪೊಲೀಸರ ಜೀಪಿಗೆ ಡಿಕ್ಕಿ ಹೊಡೆಸಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.






error: Content is protected !!
Scroll to Top