ಬಾಲಕಿಯ ಮೇಲೆ 15ರ ಬಾಲಕನಿಂದ ಅತ್ಯಾಚಾರ.!

(ನ್ಯೂಸ್ ಕಡಬ) newskadaba.com ಲಕ್ನೋ . 30: 15 ವರ್ಷದ ಬಾಲಕನೊಬ್ಬ ಏಳು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಘಟನೆ ಉತ್ತರ ಪ್ರದೇಶದ ಶಹಜಹಾನ್ಪುರದಲ್ಲಿ ನಡೆದಿದೆ.15 ವರ್ಷದ ಬಾಲಕ ಗ್ರಾಮದ 7ವರ್ಷದ ಬಾಲಕಿಯನ್ನು ಮೇಲೆ ಗುರುವಾರ ಸಂಜೆ ಅತ್ಯಾಚಾರ ಎಸಗಿದ್ದಾನೆ.

ಅತ್ಯಚಾರಕ್ಕೊಳಗಾದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ. ಅತ್ಯಾಚಾರ ನಡೆಸಿರುವ ಅಪ್ರಾಪ್ತ ಬಾಲಕನನ್ನು ಬಂಧಿಸಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಪರ್ಣ ಗೌತಮ್ ಶುಕ್ರವಾರ ತಿಳಿಸಿದ್ದಾರೆ.ಶಹಜಹಾನ್ಪುರದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಾಲಕನನ್ನು ಬಂಧಿಸಲಾಗಿದೆ. ಬಾಲಕ ಅಪ್ರಾಪ್ತ ವಯಸ್ಕನಾದ ಕಾರಣದಿಂದ ಬಾಲಾಪರಾಧಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತಿಳಿದು ಬಂದಿದೆ.

Also Read  ಐಸಿಸ್ ಬೆಂಬಲಿಗರಿಗಾಗಿ ಹುಡುಕಾಟ ➤‌ ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ಎನ್‌ಐಎ ದಾಳಿ

 

 

error: Content is protected !!
Scroll to Top