ಇಂದು ಹಸೆಮಣೆ ಏರಲಿದ್ದಾರೆ ನಟಿ ಕಾಜಲ್ ಅಗರ್​ವಾಲ್

(ನ್ಯೂಸ್ ಕಡಬ) newskadaba.com ಮುಂಬೈ . 30: ಬಹುಭಾಷಾ ನಟಿ ಕಾಜಲ್​ ಅಗರ್​ವಾಲ್​ ಇಂದು ಹಸೆಮಣೆ ಏರಲಿದ್ದಾರೆ. ಬಹುಕಾಲದ ಗೆಳೆಯ ಗೌತಮ್​ ಕಿಚ್ಲು ಜೊತೆ ಕಾಜಲ್‌ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.ಮದುವೆ ನಂತರವೂ ಚಿತ್ರರಂಗದಲ್ಲಿ ಸಕ್ರಿಯವಾಗಿರುವುದಾಗಿ ಅವರು ಭರವಸೆ ನೀಡಿದ್ದಾರೆ.

 

ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿರುವ ಕಾಜಲ್​, ಉದ್ಯಮಿ ಗೌತಮ್​ ಕಿಚ್ಲು ಜೊತೆ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ಸುದ್ದಿ ಬಹಳ ದಿನಗಳಿಂದಲೂ ಹರಿದಾಡುತ್ತಿತ್ತು. ಕೆಲವೇ ದಿನಗಳ ಹಿಂದೆ ಅವರು ತಮ್ಮ ಮದುವೆ ಸುದ್ದಿಯನ್ನು ಅನೌನ್ಸ್​ ಮಾಡಿದ್ರು. ಈಗಾಗಲೇ ಮೆಹೆಂದಿ ಹಾಗೂ ಅರಿಶಿಣ ಶಾಸ್ತ್ರ ಸೇರಿದಂತೆ ವಿವಾಹಪೂರ್ವ ಸಮಾರಂಭಗಳು ನೆರವೇರಿದ್ದು, ಅದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿವೆ. ಕಾಜಲ್​​ರನ್ನ ಮದುಮಗಳಾಗಿ ಕಂಡು ಅಭಿಮಾನಿಗಳು ಖುಷಿಯಾಗಿದ್ದಾರೆ. ಅಂದ್ಹಾಗೆ ಇಂದು ಮುಂಬೈನಲ್ಲಿ ಕಾಜಲ್​ ಮದುವೆ ನೆರವೇರಲಿದೆ.

Also Read  ಹಣ್ಣುಗಳ ಉತ್ಸವ ಹಾಗೂ ಹಲಸು ಮೇಳ

 

 

error: Content is protected !!
Scroll to Top