ಐಸಿಯುನಲ್ಲಿದ್ದ ರೋಗಿಯನ್ನೂ ಬಿಡದ ಕಾಮುಕರು.!

(ನ್ಯೂಸ್ ಕಡಬ) newskadaba.com ಹರ್ಯಾಣ . 29: ಖಾಸಗಿ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 21 ವರ್ಷದ ಕ್ಷಯ ರೋಗಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿರುವ ಗಂಭೀರ ಆರೋಪ ಕೇಳಿಬಂದಿದೆ.

ಹರ್ಯಾಣದ ಗುರುಗ್ರಾಮ್ ನಗರದಲ್ಲಿರುವ ಫೋರ್ಟಿಸ್ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ಯುವತಿಯೊಬ್ಬಳು ಚಿಕಿತ್ಸೆ ಪಡೆಯುತ್ತಿದ್ದಳು. ಶ್ವಾಸಕೋಶದ ಕ್ಷಯರೋಗದಿಂದ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ ಯುವತಿ ಕಳೆದ ಆರು ದಿನಗಳಿಂದ ಅರೆಪ್ರಜ್ಞಾವಸ್ಥೆಯಲ್ಲಿದ್ದಳು. ಈ ವೇಳೆ ಮನೆಯವರು ನೋಡಲು ಹೋದಾಗ ಚೀಟಿಯೊಂದರಲ್ಲಿ ‘ಅತ್ಯಾಚಾರಿ ವಿಕಾಸ್’ ಎಂದು ಬರೆದು ಮನೆಯವರ ಕೈಗಿಟ್ಟಿದ್ದಾಳೆ. ಆಗ ಆಕೆಯ ಮೇಲೆ ಅತ್ಯಾಚಾರ ನಡೆದಿರುವ ವಿಚಾರ ತಿಳಿದುಬಂದಿದೆ.ಘಟನೆ ಸಂಬಂಧ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಯುವತಿಯ ಪೋಷಕರು ದೂರು ದಾಖಲಿಸಿದ್ದು, ತನಿಖೆ ಆರಂಭಿಸಿದ ಪೊಲೀಸರು ಆಸ್ಪತ್ರೆಗೆ ಬಂದು ವಿಚಾರಿಸಿದ್ದಾರೆ.ಸದ್ಯ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.

Also Read  ಸಾಲದ ವಿಚಾರವಾಗಿ ಪತಿಯೊಂದಿಗೆ ಗಲಾಟೆ.! ➤ಪತ್ನಿ ಆತ್ಮಹತ್ಯೆ

 

error: Content is protected !!
Scroll to Top