ಡ್ರಗ್ಸ್ ಖರೀದಿಸಿ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದ ಖ್ಯಾತ ನಟಿ.!

(ನ್ಯೂಸ್ ಕಡಬ) newskadaba.com ಮುಂಬೈ . 26: ಡ್ರಗ್ಸ್ ಖರೀದಿಸುವಾಗ ಬಾಲಿವುಡ್ ಕಿರುತೆರೆ ನಟಿಯೊಬ್ಬಳು ರೆಡ್‍ಹ್ಯಾಡ್ ಆಗಿ ಸಿಕ್ಕಿಬಿದ್ದಿದ್ದು, ಆಕೆಯನ್ನು ಎನ್‍ಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.ಇಡೀ ಭಾರತದ ಚಿತ್ರರಂಗಕ್ಕೆ ಡ್ರಗ್ ಕಳಂಕ ಅಂಟಿಕೊಂಡಿದೆ.

ಈಗಾಗಲೇ ಬಾಲಿವುಡ್‍ನಲ್ಲಿ ರಿಯಾ ಚಕ್ರವರ್ತಿ ಡ್ರಗ್ ವಿಚಾರದಲ್ಲಿ ಆರೆಸ್ಟ್ ಆಗಿ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಜೊತೆಗೆ ಸ್ಯಾಂಡಲ್‍ವುಡ್‍ನಲ್ಲಿ ನಟಿಮಣಿಯರಾದ ರಾಗಿಣಿ ಮತ್ತು ಸಂಜಾನ ಗಲ್ರಾನಿ ಅರೆಸ್ಟ್ ಆಗಿ ಜೈಲು ಸೇರಿದ್ದಾರೆ.

ಈಗ ಬಾಲಿವುಡ್‍ನಲ್ಲಿ ಸವ್ಧಾನ್ ಇಂಡಿಯಾ ಮತ್ತು ದೇವೋ ಕೆ ದೇವ್ ಮಹಾದೇವ್ ನಂತಹ ಟಿವಿ ಧಾರಾವಾಹಿಗಳಲ್ಲಿ ಸರಸ್ವತಿ ಪಾತ್ರದಲ್ಲಿ ನಟಿಸಿದ್ದ ನಟಿ ಪ್ರೀತಿಕಾ ಚೌಹಾನ್ ಅವರನ್ನು ಎನ್‍ಸಿಬಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಮುಂಬೈನ ಮೆರ್ಸೋವಾ ಏರಿಯಾದಲ್ಲಿ ಎನ್‍ಸಿಬಿ ಅಧಿಕಾರಿಗಳು ಮಫ್ತಿಯಲ್ಲಿ ಕಾರ್ಯಚರಣೆ ಮಾಡುತ್ತಿದ್ದರು. ಈ ವೇಳೆ ಡ್ರಗ್ ಖರೀದಿಗೆ ಬಂದ ಪ್ರೀತಿಕಾ ಚೌಹಾನ್ ಅವರನ್ನು ಅಧಿಕಾರಿಗಳು ಸಾಕ್ಷಿ ಸಮೇತ ರೆಡ್‍ಹ್ಯಾಂಡ್ ಆಗಿ ಹಿಡಿದಿದ್ದಾರೆ.

Also Read  ಕಡಬದಿಂದ ಶಬರಿಮಲೆಗೆ ಪಾದಯಾತ್ರೆ

error: Content is protected !!
Scroll to Top