ಭಾರೀ ಮಳೆಗೆ ಮನೆಯ ಛಾವಣಿ ಕುಸಿತ ➤ ಐವರು ಮಹಿಳೆಯರು ಮೃತ್ಯು

(ನ್ಯೂಸ್ ಕಡಬ) newskadaba.com ಹೈದರಾಬಾದ್,ಅ. 25. ಮನೆಯ ಛಾವಣಿ ಕುಸಿದು ಐವರು ಮಹಿಳೆಯರು ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ತೆಲಂಗಾಣದ ವನಪರ್ಥಿ ಎಂಬಲ್ಲಿ ನಡೆದಿದೆ.

ವನಪರ್ಥಿಯ ಗೋಪಾಲಪೇಟ ಮಂಡಲದ ಬುದ್ಧರಾಮ್ ಬಳಿ ಈ ಅವಘಡ ಸಂಭವಿಸಿದ್ದು, ಘಟನೆಯ ಸಂದರ್ಭ ಮನೆಯೊಳಗೆ 11 ಜನ ನಿದ್ದೆ ಮಾಡುತ್ತಿದ್ದರು ಎನ್ನಲಾಗಿದೆ. ಕಳೆದ ವರ್ಷ ನಿಧನರಾದ ಮನೆಯ ಹಿರಿಯ ವ್ಯಕ್ತಿಯ ಪುಣ್ಯಸ್ಮರಣೆ ಮಾಡಲು ಕುಟುಂಬಸ್ಥರೆಲ್ಲ ಸೇರಿದ್ದರು. ಈ ಸಂದರ್ಭ ಸುರಿದ ಭಾರಿ ಮಳೆಗೆ ಮನೆಯ ಛಾವಣಿ ತೇವಗೊಂಡು ಕುಸಿದಿದೆ ಎನ್ನಲಾಗಿದೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್​ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗ್ರಾಮಸ್ಥರ ಸಹಾಯದಿಂದ ಪೊಲೀಸರು ಅವಶೇಷಗಳಡಿ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆದಿದ್ದಾರೆ.

Also Read  ಅಮುಲ್‌ ಮಾರುಕಟ್ಟೆಗೆ ಪ್ರವೇಶಿಸುತ್ತಿರುವುದು ಸ್ಪರ್ಧಿಸಲು ಅಲ್ಲ ‘ಸಹಬಾಳ್ವೆ’ ನಡೆಸಲು.!   ➤ ಅಮುಲ್‌ ಎಂಡಿ ಜಯನ್‌ ಮೆಹ್ತಾ ಹೇಳಿಕೆ!

 

error: Content is protected !!
Scroll to Top