ಸಿನಿಮಾ ಪೈರಸಿ ಹಿನ್ನಲೆ ➤ ತಮಿಳ್ ರಾಕರ್ಸ್ ವೈಬ್‍ಸೈಟ್ ಸಂಪೂರ್ಣ ಬ್ಲಾಕ್

(ನ್ಯೂಸ್ ಕಡಬ) newskadaba.com ದೆಹಲಿ . 22: ಸಿನಿಮಾ ಪೈರಸಿ ವಿಚಾರವಾಗಿ ನಿರ್ಮಾಪಕರಿಗೆ ದೊಡ್ಡ ತಲೆನೋವಾಗಿದ್ದ ತಮಿಳ್ ರಾಕರ್ಸ್ ವೈಬ್‍ಸೈಟ್ ಅನ್ನು ಸಂಪೂರ್ಣವಾಗಿ ಬ್ಲಾಕ್ ಮಾಡಲಾಗಿದೆ. ಇತ್ತೀಚೆಗೆ ಅಮೆಜಾನ್ ಇಂಟರ್ ನ್ಯಾಷನಲ್ ಈ ಪೈರಸಿ ವೆಬ್‍ಸೈಟ್ ವಿರುದ್ಧ ಎರಡು ಬಾರಿ ಡಿಜಿಟಲ್ ಮಿಲೇನಿಯಮ್ ಕಾಪಿರೈಟ್ ಆಕ್ಟ್ಗೆ ವರದಿಗಳನ್ನು ಸಲ್ಲಿಸಿತ್ತು.

ಈ ಕಾರಣದಿಂದ ಈ ಪೈರಸಿ ವೆಬ್‍ಸೈಟ್ ಅನ್ನು ಅಂತರ್ಜಾಲ ನಿರ್ದಿಷ್ಟ ಹೆಸರು ಮತ್ತು ಸಂಖ್ಯೆಯ ಕಾರ್ಪೊರೇಷನ್ (ಐಸಿಎಎನ್‍ಎನ್) ನೋಂದಾವಣೆಯಿಂದ ತೆಗೆದುಹಾಕಲಾಗಿದೆ.ಸಿನಿಮಾಗಳು ಬಿಡುಗಡೆಯಾದ ಮರುದಿನವೇ ಪೈರಸಿ ಮಾಡುತ್ತಿದ್ದ ತಮಿಳ್ ರಾಕರ್ಸ್ ಅನ್ನು ಅಂತಿಮವಾಗಿ ನಿರ್ಬಂಧಿಸಲಾಗಿದೆ. ತಮಿಳು ರಾಕರ್ಸ್ ತಮಿಳು, ತೆಲುಗು, ಹಿಂದಿ, ಇಂಗ್ಲಿಷ್, ಮಲೆಯಾಳಂ, ಕನ್ನಡ ಮತ್ತು ಇತರ ಭಾಷೆಯ ಚಲನಚಿತ್ರಗಳನ್ನು ಬಿಡುಗಡೆಯಾದ ಮರುದಿನೇ ತನ್ನ ವೆಬ್‍ಸೈಟಿನಲ್ಲಿ ಅಪ್‍ಲೋಡ್ ಮಾಡುತ್ತಿತ್ತು. ಜೊತೆಗೆ ತನ್ನ ಸೈಟಿನ ಡೊಮೇನ್ ಅನ್ನು ಹೊಸ ಲಿಂಕ್‍ಗೆ ಪದೇ ಪದೇ ಬದಲಾಯಿಸುತ್ತಾ ಇಷ್ಟು ದಿನ ಅಕ್ರಮವಾಗಿ ಪೈರಸಿ ಮಾಡುತ್ತಾ ಬಂದಿತ್ತು.ಆದರೆ ಈಗ ಐಸಿಎಎನ್‍ಎನ್ ತಮಿಳ್ ರಾಕರ್ಸ್ ಲಿಂಕ್ ಅನ್ನೇ ಕಿತ್ತು ಹಾಕಿದೆ.

Also Read  ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ವ್ಯಾಪಿಸಿದ ಚರ್ಮಗಂಟು ರೋಗ      

 

error: Content is protected !!
Scroll to Top