ಕಾಸರಗೋಡು: ನೇಣು ಬಿಗಿದು ವಿದ್ಯಾರ್ಥಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕಾಸರಗೋಡು, . 21. ವಿದ್ಯಾರ್ಥಿಯೋರ್ವ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೇಕಲ ಠಾಣಾ ವ್ಯಾಪ್ತಿಯ ತೃಕ್ಕನ್ನಾಡ್ ಎಂಬಲ್ಲಿ ನಡೆದಿದೆ.

ಮೃತಪಟ್ಟ ಬಾಲಕನನ್ನು ಏಳನೇ ತರಗತಿ ವಿದ್ಯಾರ್ಥಿ ಕೆ. ವಿಘ್ನೇಶ್ ( 13) ಎಂದು ಗುರುತಿಸಲಾಗಿದೆ. ತಾಯಿ ಮತ್ತು ಸಹೋದರಿ ಹೊರಗಡೆ ತೆರಳಿದ್ದ ಸಂದರ್ಭದಲ್ಲಿ ಈತ ಈ ಕೃತ್ಯ ನಡೆಸಿದ್ದಾನೆ ಎನ್ನಲಾಗಿದೆ. ಬಳಿಕ ಇಬ್ಬರು ಮನೆಗೆ ಬಂದು ನೋಡಿದಾಗ ವಿಘ್ನೇಶ್ ಫ್ಯಾನ್ ಗೆ ನೇಣು ಬಿಗಿದಿರುವುದು ಕಂಡು ಬಂದಿದೆ. ಕೂಡಲೇ ಈತನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ. ಕೃತ್ಯಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಭೇಟಿ ನೀಡಿದ ಬೇಕಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read  ಸೂರಿಕುಮೇರು: ಸರಣಿ ಕಳ್ಳತನ ➤ ಅಂಗಡಿ ಹಾಗೂ ಎರಡು ಮನೆಯ ಬೀಗ ಮುರಿದು ನಗ-ನಗದು ಕಳವು

 

error: Content is protected !!
Scroll to Top