ಮದ್ಯಕ್ಕೆ ಸ್ಯಾನಿಟೈಸರ್ ಮಿಕ್ಸ್ ಮಾಡಿ ಸೇವನೆ ➤ ಐವರು ಮೃತ್ಯು

(ನ್ಯೂಸ್ ಕಡಬ) newskadaba.com ಕೇರಳ . 20: ಮದ್ಯಕ್ಕೆ ಸ್ಯಾನಿಟೈಸರ್ ಮಿಕ್ಸ್ ಮಾಡಿ ಸೇವನೆ ಮಾಡಿದ ಪರಿಣಾಮ ಐವರು ಸಾವನ್ನಪ್ಪಿರುವ ಘಟನೆ ಕೇರಳದ ಪಾಲಕ್ಕಾಡ್ ಜಿಲ್ಲೆಯ ಕಾಂಜಿಕೋಡ್‍ನಲ್ಲಿ ನಡೆದಿದೆ.ಮೃತ ಐವರನ್ನು ರಾಮನ್ (61), ಅಯ್ಯಪ್ಪನ್ (55), ಅರುಣ್ (22), ಶಿವನ್ (45) ಮತ್ತು ಮೂರ್ತಿ (24) ಎಂದು ಗುರುತಿಸಲಾಗಿದೆ.

 

ಮೃತರು ಒಂದೇ ಬುಡಕಟ್ಟು ಕಾಲೊನಿಯಲ್ಲಿ ವಾಸಿಸುತ್ತಿದ್ದರು, ಭಾನುವಾರ ಸಂಜೆ ಒಟ್ಟಿಗೆ ಮದ್ಯ ಸೇವಿಸಿ ಅಂದೇ ರಾತ್ರಿಯಲ್ಲಿ ಕುಸಿದು ಬಿದ್ದಿದ್ದಾರೆ, ಆದರೆ ಸೋಮವಾರದಂದು ಐವರು ಮೃತಪಟ್ಟಿದ್ದಾರೆ.ಇವರ ಜೊತೆ ಮದ್ಯ ಸೇವಿಸಿದ ಮಹಿಳೆಯರೂ ಸೇರಿದಂತೆ ಇನ್ನೂ ಕೆಲವರು ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಅವರನ್ನು ಪಾಲಕ್ಕಾಡ್ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಮೃತರು ಮದ್ಯಕ್ಕೆ ಸ್ಯಾನಿಟೈಸರ್ ಮಿಕ್ಸ್ ಮಾಡಿ ಸೇವನೆ ಮಾಡಿದ್ದಾರೆ ಎಂಬುದು ತಿಳಿದು ಬಂದಿದೆ.

Also Read  ಹಾಡಹಗಲೇ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪಾಪಿ ಶಿಕ್ಷಕ..! ➤ಆರೋಪಿ ಅರೆಸ್ಟ್

 

error: Content is protected !!
Scroll to Top