ರಾಗಿಣಿ, ಸಂಜನಾಗೆ ಬೇಲ್ ಸಿಗದಿದ್ರೆ ಕಮಿಷನರ್ ಕಚೇರಿ ಬ್ಲಾಸ್ಟ್ ಆಗುತ್ತೆ.!? ➤ ನ್ಯಾಯಾಧೀಶರು ಸೇರಿ ಸಿಸಿಬಿ ತನಿಖಾಧಿಕಾರಿಗಳಿಗೆ ಬೆದರಿಕೆ ಪತ್ರ ರವಾನೆ

(ನ್ಯೂಸ್ ಕಡಬ) newskadaba.com ಬೆಂಗಳೂರು, . 20: ಡ್ರಗ್ಸ್ ಪ್ರಕರಣದಲ್ಲಿ ಬಂಧನದಲ್ಲಿರುವ ನಟಿ ರಾಗಿಣಿ ದ್ವಿವೇದಿ ಜಾಮೀನು ಸಿಗದಿದ್ರೆ ಕಮಿಷನರ್ ಕಚೇರಿ ಮತ್ತು ಸಿಟಿ ಸಿವಿಲ್ ಕೋರ್ಟಿಗೆ ಬೆದರಿಕೆ ಪತ್ರ ಬಂದಿದೆ. ಪತ್ರದ ಜೊತೆಗೆ ಕಮೀಷನರ್ ಕಚೇರಿಗೆ ಬಂಡೆ ಒಡೆಯುವ ಸ್ಫೋಟಕ ರವಾನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಡ್ರಗ್ಸ್ ಕೇಸ್ ನಲ್ಲಿ ನಟಿ ಸಂಜನಾ, ರಾಗಿಣಿ ಸೇರಿದಂತೆ 15ಕ್ಕೂ ಅಧಿಕ ಮಂದಿ ಜೈಲು ಪಾಲಾಗಿದ್ದಾರೆ. ಇತ್ತ ಎನ್.ಡಿ.ಪಿ.ಎಸ್ ಕೋರ್ಟ್ ನಲ್ಲಿ ಜಾಮೀನು ಸಿಗದೇ ಸಂಜನಾ ಹಾಗೂ ರಾಗಿಣಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಈ ನಡುವೆ ತನಿಖೆಯಿಂದ ಹಿಂದೆ ಸರಿಯುವಂತೆ ಸಿಸಿಬಿ ಹಿರಿಯ ಅಧಿಕಾರಿಗಳಿಗೆ ಹಾಗೂ ನಟಿಮಣಿಯರಿಗೆ ಜಾಮೀನು ಮಂಜೂರು ಮಾಡುವಂತೆ ಬೆದರಿಕೆ ಪತ್ರ ಬಂದಿದೆ.

Also Read  ಆನ್‍ಲೈನ್ ಬೆಟ್ಟಿಂಗ್ ದಂಧೆಗೆ ಬಿದ್ದು ಸ್ವಂತ ಮನೆಯಿಂದಲೇ ಚಿನ್ನ ಕದ್ದ ಯುವಕ - ಪೊಲೀಸರ ತನಿಖೆ ವೇಳೆ ಮನೆಯವರಿಗೆ ಕಾದಿತ್ತು ಶಾಕ್

 

ಎನ್‍ಡಿಪಿಎಸ್ ಕೋರ್ಟ್ ನ್ಯಾಯಾಧೀಶರಿಗೆ ಬೆದರಿಕೆ ಪತ್ರ ಬಂದಿದ್ದು, ನಟಿ ಸಂಜನಾ ಮತ್ತು ರಾಗಿಣಿಗೆ ಜಾಮೀನು ನೀಡಬೇಕು. ಇಲ್ಲವಾದಲ್ಲಿ ಕಾರು ಉಡಾಯಿಸೋದಾಗಿ ಹೇಳಲಾಗಿದೆ. ತುಮಕೂರಿನಿಂದ ಬಂದಿರುವ ಅನಾಮಧೇಯ ಪತ್ರದಲ್ಲಿ ಬಾಂಬ್ ಇದೆ ಅಂತಾ ಹೆದರಿಸಲಾಗಿತ್ತು. ಪತ್ರದ ಒಳಗೆ ಕೇಬಲ್ ವೈರ್ ಮತ್ತು ಬಂಡೆ ಕತ್ತರಿಸಲು ಬಳಸುವ ಡಿಟೋನೇಟರ್ ಇತ್ತು ಎಂದು ಮೂಲಗಳು ತಿಳಿಸಿವೆ. ಬಾಂಬ್ ಸ್ಕ್ವ್ಯಾಡ್ ಮತ್ತು ಶ್ವಾನ ದಳದಿಂದ ಪತ್ರದ ಒಳಗಿದ್ದ ವೈರ್ ತೆಗೆಯಲಾಗಿದೆ.

error: Content is protected !!
Scroll to Top