ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಐಪಿಎಲ್‍ನಲ್ಲಿ ಧೋನಿ ವೈಫಲ್ಯ ➤ ಧೋನಿ ಮಗಳು ಝೀವಾಗೆ ಅತ್ಯಾಚಾರ ಬೆದರಿಕೆ.! – News Kadaba

ಐಪಿಎಲ್‍ನಲ್ಲಿ ಧೋನಿ ವೈಫಲ್ಯ ➤ ಧೋನಿ ಮಗಳು ಝೀವಾಗೆ ಅತ್ಯಾಚಾರ ಬೆದರಿಕೆ.!

(ನ್ಯೂಸ್ ಕಡಬ) newskadaba.com ನವದೆಹಲಿ, ಅ. 10: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ಐಪಿಎಲ್-2020ಯಲ್ಲಿ ವಿಫಲವಾಗಿದ್ದಕ್ಕೆ ವ್ಯಕ್ತಿಯೋರ್ವ ಅವರ ಮಗಳು ಝೀವಾ ಮೇಲೆ ಅತ್ಯಾಚಾರ ಮಾಡುವ ಬೆದರಿಕೆ ಹಾಕಿದ್ದಾನೆ.ಯುಎಇಯಲ್ಲಿ ನಡೆಯುತ್ತಿರುವ ಐಪಿಎಲ್‍ನಲ್ಲಿ ಧೋನಿ ನೇತೃತ್ವದ ತಂಡ ಆರಂಭದಲ್ಲೇ ಎಡವಿದೆ. ಟೂರ್ನಿಯ ಆರಂಭದ ಮೊದಲ ಪಂದ್ಯವನ್ನು ಗೆದ್ದರೂ ನಂತರ ಅದೇ ಲಯದಲ್ಲಿ ತಂಡವನ್ನು ತೆಗೆದುಕೊಂಡು ಹೋಗುವಲ್ಲಿ ಧೋನಿ ಎಡವಿದ್ದಾರೆ.

ಹೀಗಾಗಿ ವ್ಯಕ್ತಿಯೋರ್ವ ಧೋನಿಯ ಐದು ವರ್ಷದ ಮಗಳನ್ನು ಅತ್ಯಾಚಾರ ಮಾಡುವುದಾಗಿ ಟ್ವಿಟ್ಟರಿನಲ್ಲಿ ಕಮೆಂಟ್ ಮಾಡಿದ್ದಾನೆ.ಕಳೆದ ಬುಧವಾರ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪಂದ್ಯದಲ್ಲಿ ಹೀನಾಯವಾಗಿ ಸೋತಿತ್ತು. ನಂತರ ಟ್ವಿಟ್ಟರಿನಲ್ಲಿ ಕಮೆಂಟ್ ಮಾಡಿರುವ ವಿಜಯ್ ಎಂಬ ವ್ಯಕ್ತಿ ಧೋನಿ ಮಗಳನ್ನು ಅತ್ಯಾಚಾರ ಮಾಡುವುದಾಗಿ ಹೇಳಿದ್ದಾನೆ. ಜೊತೆಗೆ ಅಸಭ್ಯ ಪದಗಳನ್ನು ಬಳಸಿ ಐದು ವರ್ಷದ ಕಂದಮ್ಮನನ್ನು ನಿಂದಿಸಿದ್ದಾನೆ.

ಜೊತೆಗೆ ಟ್ವಿಟ್ಟರ್ ನಂತರ ಬೇರೆ ಬೇರೆ ಸಾಮಾಜಿಕ ಜಾಲತಾಣದಲ್ಲೂ ಕೂಡ ಧೋನಿ ಮಗಳು ಝೀವಾ ಅವರ ಹೆಸರಿನಲ್ಲಿ ಕಮೆಂಟ್‍ಗಳು ಬಂದಿವೆ. ಇಲ್ಲೂ ಕೂಡ ಝೀವಾಳಿಗೆ ಜೀವ ಬೆದರಿಕೆ ಮತ್ತು ಅತ್ಯಾಚಾರ ಬೆದರಿಕೆ ಹಾಕಿದ್ದಾರೆ. ಭಾರತಕ್ಕಾಗಿ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದುಕೊಟ್ಟ, ಬೆಸ್ಟ್ ನಾಯಕನಿಗೆ ಒಂದು ಟೂರ್ನಿಯಲ್ಲಿ ಕೆಟ್ಟ ಪ್ರದರ್ಶನ ನೀಡಿದಕ್ಕೆ ಈ ರೀತಿ ಮಾತನಾಡಬಾರದು ಎಂದು ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜೊತೆಗೆ ಪುಟ್ಟ ಮಗುವಿನ ವಿಚಾರ ಮಾತನಾಡಿರುವುದಕ್ಕೆ ನೆಟ್ಟಿಗರು ಗರಂ ಆಗಿದ್ದಾರೆ.

Scroll to Top