ಡ್ರಗ್ಸ್ ಪ್ರಕರಣ : ವಿಚಾರಣೆಗೆ ಹಾಜರಾದ ನಟಿ ದೀಪಿಕಾ ಪಡುಕೋಣೆ



(ನ್ಯೂಸ್ ಕಡಬ) newskadaba.com ಮುಂಬೈ, ಸೆ. 26:  ಮಾದಕ ವಸ್ತು ಸೇವನೆ ಪ್ರಕರಣ ಸಂಬಂಧ ಬಾಲಿವುಡ್’ನ ಖ್ಯಾತ ನಟಿ ದೀಪಿಕಾ ಪಡುಕೋಣೆಯವರು ಶನಿವಾರ ಮಾದಕ ವಸ್ತು ನಿಯಂತ್ರಣ ದಳ (ಎನ್’ಸಿಬಿ) ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.







ಡ್ರಗ್ಸ್ ಪ್ರಕರಣ ಸಂಬಂಧ ದೀಪಿಕಾ ಪಡುಕೋಣೆಯವರಿಗೆ ಶುಕ್ರವಾರ ಹಾಜರಾಗಲು ಎನ್’ಸಿಬಿ ಸೂಚನೆ ನೀಡಿತ್ತು. ಆದರೆ, ಶನಿವಾರ ವಿಚಾರಣೆಗೆ ಹಾಜರಾಗುವುದಾಗಿ ದೀಪಿಕಾ ತಿಳಿಸಿದ್ದರು. ಇದರಂತೆ ಇಂದು ದೀಪಿಕಾ ಅವರು ವಿಚಾರಣೆಗೆ ಹಾಜರಾಗಿದ್ದಾರೆ. ಬಾಲಿವುಡ್’ನ ದೀಪಿಕಾ ಪಡುಕೋಣೆಯವರು ಡ್ರಗ್ಸ್’ಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದ್ದ ವಾಟ್ಸ್’ಆಪ್ ಗ್ರೂಪ್’ಗೆ ದೀಪಿಕಾ ಅವರೇ ಆಡ್ಮಿನ್ ಆಗಿದ್ದರು ಎಂದು ಹೇಳಲಾಗುತ್ತಿದೆ. ಕ್ವಾನ್ ಕಂಪನಿಯಲ್ಲಿ ಟ್ಯಾಲೆಟ್ ಮ್ಯಾನೇಜರ್ ಆಗಿರುವ ಜಯಾ ಸಹಾ ಎಂಬಾಕೆ ಈ ಗ್ರೂಪ್ ಮಾಡಿದ್ದು, ಅದರಲ್ಲಿ ದೀಪಿಕಾ ಅವರ ಮ್ಯಾನೇಜರ್ ಆಗಿರುವ ಕರೀಷ್ಮಾ ಪ್ರಕಾಶ್ ಅವರೂ ಕೂಡ ಆಡ್ಮಿನ್ ಆಗಿದ್ದರು ಎಂದು ಹೇಳಲಾಗುತ್ತಿದೆ.

 






error: Content is protected !!
Scroll to Top