► Tv9, ಸಮಯ ಟಿವಿಗಳ ವರದಿಗಾರ ನೀರಿಗೆ ಬಿದ್ದು ಮೃತ್ಯು

(ನ್ಯೂಸ್ ಕಡಬ) newskadaba.com ಕಾರವಾರ, ಸೆ.19. ಖಾಸಗಿ ಸುದ್ದಿ ವಾಹಿನಿಯ ವರದಿಗಾರರೋರ್ವರು ಹೊನ್ನಾವರ ಬಂದರಿನಲ್ಲಿ ಕಾಲುಜಾರಿ ಬಿದ್ದು ಮೃತಪಟ್ಟ ಖೇದಕರ ಘಟನೆ ಹೊನ್ನಾವರದಲ್ಲಿ ಸೋಮವಾರ ರಾತ್ರಿ ನಡೆದಿದೆ.

ಹೊನ್ನಾವರ ಮೂಲದ ಮಂಜು ಹೊನ್ನಾವರ್ (34) ಸಾವನ್ನಪ್ಪಿದ ದುರ್ದೈವಿ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡು ಬಂದರಿನಲ್ಲಿ ಈ ಘಟನೆ ನಡೆದಿದೆ. ಟಿ.ವಿ.9 ಹಾಗೂ ಸಮಯ ಟಿ.ವಿ ಯಲ್ಲಿ ಮಂಜು ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.

Scroll to Top