ಭಾರತದಲ್ಲೂ ಕೊರೋನಾ ವೈರಸ್ ಆತಂಕ: ಕೇರಳ 7 ಮಂದಿಗೆ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ

ಕೊಚ್ಚಿ, ಜ.25: ಚೀನಾದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಮಾರಕ ಕೊರೋನಾ ವೈರಸ್ ಇದೀಗ ಭಾರತದಲ್ಲೂ ಆತಂಕವನ್ನು ಸೃಷ್ಟಿಸಿದ್ದು, ಚೀನಾದಿಂದ ಬಂದಿರುವ 11 ಮಂದಿಯ ಪೈಕಿ 7 ಮಂದಿಯಲ್ಲಿ ಕೊರೋನಾ ವೈರಸ್’ನ ಗುಣಲಕ್ಷಣಗಳು ಕಂಡು ಬಂದಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.

ಕೆಲ ದಿನಗಳಿಂದ ಚೀನಾ ರಾಷ್ಟ್ರದಿಂದ ಭಾರತಕ್ಕೆ ಆಗಮಿಸಿರುವವರ ಪೈಕಿ ಹಲವು ಜನರಲ್ಲಿ ಸೋಂಕು ತಗುಲಿರುವ ಶಂಕೆಗಳು ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕೇರಳದ ವಿವಿಧ ಆಸ್ಪತ್ರೆಗಳಲ್ಲಿ 7, ಮುಂಬೈನಲ್ಲಿ ಇಬ್ಬರು, ಬೆಂಗಳೂರು ಮತ್ತು ಹೈದ್ರಾಬಾದ್ ನಲ್ಲಿ ತಲಾ ಒಬ್ಬರನ್ನು ಪ್ರತ್ಯೇಕ ಕೋಣೆಯಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಆದರೆ, ಈ ಪೈಕಿ ಮುಂಬೈನಲ್ಲಿ ದಾಖಲಾಗಿದ್ದ ಇಬ್ಬರು, ಬೆಂಗಳೂರು ಮತ್ತು ಹೈದ್ರಾಬಾದ್ ನಲ್ಲಿ ದಾಖಲಾಗಿದ್ದ ತಲಾ ಒಬ್ಬರ ರಕ್ತ ಪರೀಕ್ಷೆಯ ವರದಿ ಶುಕ್ರವಾರ ರಾತ್ರಿ ಪ್ರಕಟವಾಗಿದೆ. ಅದರಲ್ಲಿ ನಾಲ್ವರಿಗೆ ಕೊರೋನಾ ವೈರಸ್ ಸೋಂಕು ತಗುಲದೇ ಇರುವುದು ಖಚಿತವಾಗಿದೆ.

Also Read  ದ.ಕ.ದಲ್ಲಿ ಕಾಫಿ ಬೆಳೆಗೆ ಪೋತ್ಸಾಹಿಸಲು ಮನವಿ ಮಾಡಿದ ಸಂಸದ ಕ್ಯಾ. ಚೌಟ

ಚೀನಾದಿಂದ ಕೇರಳಕ್ಕೆ ಆಗಮಿಸಿದ 80 ಜನರಿಗೆ ಸೋಂಕು ತಗುಲಿರಬಹುದಾದ ಸಾಧ್ಯತೆಯ ಹಿನ್ನೆಲೆಯಲ್ಲಿ ಅವರ ಆರೋಗ್ಯದ ಮೇಲೆ ಆರೋಗ್ಯಾಧಿಕಾರಿಗಳು ನಿಗಾವಹಿಸಿದ್ದಾರೆ. ಚೀನಾದಿಂದ ಮರಳಿದ ಕೇರಳದ 80 ಜನರ ಪೈಕಿ 7 ಮಂದಿಗೆ ಕೋರೋನಾ ವೈರಸ್ ಲಕ್ಷಣಗಳಾದ ಜ್ವರ, ಕೆಮ್ಮು, ಗಂಟಲು ಕೆರೆತ ಕಾಣಿಸಿಕೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ 73 ಜನರಲ್ಲಿ ರೋಗ ಲಕ್ಷಣೆಗಳು ಕಂಡು ಬರದೇ ಇದ್ದರೂ ಆರೋಗ್ಯದ ಮೇಲೆ ನಿಗಾವಹಿಸಲಾಗಿದೆ.

ಇನ್ನು ಈ ಹಿಂದೆ ಸೌದಿ ಅರೇಬಿಯಾದಲ್ಲಿ ಕೊರೋನಾ ವೈರಸ್ ಸೋಂಕಿಗೆ ಗುರಿಯಾಗಿದ್ದಾರೆಂದು ಹೇಳಲಾಗುತ್ತಿದ್ದ ಕೇರಳ ಮೂಲದ ನರ್ಸ್’ಗೆ ಕೊರೋನಾ ವೈರಸ್ ವ್ಯಾಧಿ ಅಂಟಿಲ್ಲ. ಪರೀಕ್ಷೆ ವೇಳೆ ನೆಗೆಟಿವ್ ಎಂಬ ಫಲಿತಾಂಶ ಬಂದಿದೆ ಎಂದು ಸೌದಿ ಅರೇಬಿಯಾ ಆರೋಗ್ಯ ಇಲಾಖೆ ಶುಕ್ರವಾರ ಸ್ಪಷ್ಟಪಡಿಸಿದೆ.

Also Read  ಜ.21ರಿಂದ ಮಂಗಳೂರು-ಸಿಂಗಾಪುರ ವಿಮಾನ ಹಾರಾಟ ಆರಂಭ

error: Content is protected !!
Scroll to Top