ಜಿಯೋ ಉಚಿತ ಫೋನ್ ಬುಕಿಂಗ್ ಇಂದಿನಿಂದ ಆರಂಭ ► ಹೇಗೆ ಬುಕ್ ಮಾಡುವುದು ಎನ್ನುವ ಗೊಂದಲವೇ…?

(ನ್ಯೂಸ್ ಕಡಬ) newskadaba.com ಮುಂಬೈ, ಆ.24. ಬಹುನಿರೀಕ್ಷಿತ ರಿಲಯನ್ಸ್ ಕಂಪನಿಯ ಉಚಿತ ಜಿಯೋ ಮೊಬೈಲ್‌ ಫೋನ್ ಗೆ ಮುಂಗಡ ಬುಕ್ಕಿಂಗ್ ಗುರುವಾರದಿಂದ ಆರಂಭವಾಗಲಿದ್ದು, 1500 ರೂ.ಗಳನ್ನು ಡೆಪಾಸಿಟ್ ಇಟ್ಟು ಬುಕ್ ಮಾಡುವ ಮೊಬೈಲ್ ಗಳು ಸೆಪ್ಟೆಂಬರ್ ಮಧ್ಯಾರ್ಧದಲ್ಲಿ ವೇಳೆಗೆ ಗ್ರಾಹಕರಿಗೆ ಲಭ್ಯವಾಗಲಿವೆ.

ಕಂಪನಿಯ ಅಧಿಕೃತ ವೆಬ್‌ಸೈಟ್‌ jio.com‌ ಗೆ ಭೇಟಿ ನೀಡಿ ಜಿಯೋ ಫೋನ್ ಬ್ಯಾನರ್ ಇರುವ  keep me posted ಬಟನ್ ಮೇಲೆ ಕ್ಲಿಕ್ ಮಾಡಬೇಕು. ಆ ಬಳಿಕ ನಿಮ್ಮ ಹೆಸರು, ಇ-ಮೇಲ್ ಐಡಿ, ಮೊಬೈಲ್ ನಂಬರ್ ಹಾಗೂ ಪಿನ್ ಕೋಡ್ ಹಾಕಿ register ಮೇಲೆ ಕ್ಲಿಕ್ ಮಾಡಬೇಕು. ಫಾರ್ಮ್ ಸಬ್ ಮಿಟ್ ಮಾಡಿದ ಬಳಿಕ ಜಿಯೋ ಕಂಪನಿಯಿಂದ ಸಂದೇಶ ಬರುತ್ತದೆ. ಅಲ್ಲದೆ ಸ್ಥಳೀಯ ಜಿಯೋ ಸ್ಟೋರ್‌ ನಲ್ಲೂ ಜಿಯೋ ಫೋನ್ ಬುಕ್ ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ. ವಾಣಿಜ್ಯೋದ್ಯಮ ಗ್ರಾಹಕರು ಸಹ ತಮ್ಮ GSTN ಅಥವಾ ಪಾನ್‌ಕಾರ್ಡ್ ಸಂಖ್ಯೆ ಬಳಸಿ ರಿಲಯನ್ಸ್ ಜಿಯೋ ಫೋನ್ ಬುಕ್ ಮಾಡಬಹುದಾಗಿದೆ.

error: Content is protected !!
Scroll to Top