ದಿಲ್ಲಿ: ಮಂಜು ಆವರಿಸಿ ರಸ್ತೆ ಕಾಣದೆ ಕಣಿವೆಗೆ ಬಿದ್ದ ಕಾರು; ಆರು ಮಂದಿ ಮೃತ್ಯು

ಹೊಸದಿಲ್ಲಿ, ಡಿ.30: ರಸ್ತೆಯಲ್ಲಿ ಸಂಪೂರ್ಣ ಮಂಜು ಆವರಿಸಿದ ಪರಿಣಾಮ ರಸ್ತೆ ಕಾಣದೆ ಕಾರೊಂದು ಕಣಿವೆಗೆ ಉರುಳಿ ಆರು ಮಂದಿ ಮೃತಪಟ್ಟ ಘಟನೆ ದಿಲ್ಲಿಯ ಹೊರವಲಯದಲ್ಲಿರುವ ಗ್ರೀಟರ್‌ ನೋಯ್ಡಾದಲ್ಲಿ ನಡೆದಿದೆ.

Nk Kukke

 

ಮೃತರನ್ನು ಮಹೇಶ್ ( 35), ಕಿಶನ್ ಲಾಲ್ (50), ನೀರೆಶ್ (17), ರಾಮ್ ಖಿಲಾಡಿ (75), ಮಲ್ಲು (12) ಮತ್ತು ನೇತ್ರಪಾಲ್ (40) ಎಂದು ಗುರುತಿಸಲಾಗಿದೆ. ಕಾರಿನಲ್ಲಿ ಒಟ್ಟು ಹನ್ನೊಂದು ಮಂದಿ ಪ್ರಯಾಣ ಮಾಡಿದ್ದು,  ಮಕ್ಕಳು ಸೇರಿ ಆರು ಮಂದಿ ಸಾವನ್ನಪ್ಪಿದ್ದಾರೆ. ಐವರಿಗೆ ಗಾಯವಾಗಿದ್ದು ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ನಡೆಸ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.

 

 

Scroll to Top