ಹಠಾತ್ತನೆ ಕುಸಿತ ಕಂಡ ಈರುಳ್ಳಿ ದರ ➤ ಹೊಸ ದರ ಎಷ್ಟು ಗೊತ್ತೇ..?

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ.11. ರಾತ್ರಿ ಬೆಳಗಾಗುವುದರೊಳಗೆ ಏಕಾಏಕಿ ಬೆಲೆ ಏರಿಕೆಗೊಂಡು ಗಗನಮುಖಿಯಾಗಿದ್ದ ಈರುಳ್ಳಿ ದರವು ಇದೀಗ ಹಠಾತ್ತನೆ ಇಳಿಮುಖವಾಗಿದ್ದು, ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ.

ಮಳೆ ಹಾನಿಯಿಂದಾಗಿ ಪೂರೈಕೆ ಕೊರತೆ ಉಂಟಾದ ಪರಿಣಾಮ ಕೆಜಿಗೆ 200 ರೂ. ಆಗಿ ಗ್ರಾಹಕರ ಕಣ್ಣಲ್ಲಿ ನೀರು ತರಿಸಿದ್ದ ಈರುಳ್ಳಿ ದರವು ಇದೀಗ ಹಠಾತ್‌ ಕುಸಿದಿದ್ದು, ಕೆಜಿಗೆ 60 ರೂ. ಗೆ ಬಂದು ತಲುಪಿದೆ. ವಿವಿಧೆಡೆಯಿಂದ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ತರಿಸಲಾಗಿರುವುದರಿಂದ ಬೆಲೆ ಇಳಿಕೆಗೆ ಕಾರಣವಾಗಿದೆ ಎನ್ನಲಾಗಿದೆ.

Scroll to Top