ನೀವು ಎಟಿಎಂ ಕಾರ್ಡ್ ಉಪಯೋಗಿಸುತ್ತಿದ್ದೀರಾ..? ► ಶೀಘ್ರದಲ್ಲೇ ನಿಮ್ಮ ಕಾರ್ಡ್ ಬ್ಲಾಕ್ ಆಗಲಿದೆ.‌‌‌. ಕಾರಣವೇನು ಗೊತ್ತೇ…?

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಆ. 21. ಉಳಿತಾಯ ಖಾತೆಯ ಬಡ್ಡಿದರ ಕಡಿಮೆ ಮಾಡಿದ ಬಳಿಕ ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ಕಾರ್ಡ್ ಕುರಿತು ಹೊಸ ನಿಯಮವನ್ನು ಜಾರಿಗೆ ತರುತ್ತಿದೆ.

ಮೆಗಾಸ್ಟ್ರಿಪ್(ಮ್ಯಾಗ್ನೆಟಿಕ್) ಡೆಬಿಟ್ ಕಾರ್ಡ್‌ನ್ನು ಇಎಂವಿ ಚಿಪ್ ಇರುವ ಡೆಬಿಟ್ ಕಾರ್ಡ್ ಗಳೊಂದಿಗೆ ಬದಲಾಯಿಸಲು ನಿರ್ಧರಿಸಲಾಗಿದ್ದು, ಬದಲಾವಣೆ ಮಾಡದಿದ್ದಲ್ಲಿ ಎಟಿಎಂ ಕಾರ್ಡನ್ನು ಬ್ಲಾಕ್ ಮಾಡಲಾಗುವುದು ಎಂದು ಬ್ಯಾಂಕ್ ಹೇಳಿದೆ. ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ಇಂತಹ ಕ್ರಮ ಕೈಗೊಳ್ಳಲಾಗಿದೆ ಎಂದು ಬ್ಯಾಂಕ್ ತನ್ನ ಅಧಿಕೃತ ವೆಬ್‍ಸೈಟ್ ಮೂಲಕ ಪ್ರಕಟಿಸಿದೆ. ಗ್ರಾಹಕರು ತಮ್ಮ ಡೆಬಿಟ್ ಕಾರ್ಡ್‌ನ್ನು ಬದಲಾಯಿಸಲು ತಮ್ಮ ಬ್ಯಾಂಕ್‍ಗೆ ಭೇಟಿ ನೀಡಬಹುದು ಅಥವಾ ಆನ್‍ಲೈನ್ ಬ್ಯಾಂಕಿಂಗ್ ಮೂಲಕವೂ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ.

Scroll to Top