ಅತ್ಯಾಚಾರಿಗಳನ್ನು ಭರ್ಜರಿಯಾಗಿ ಬೇಟೆಯಾಡಿದ ‘ವೀರ ಕನ್ನಡಿಗ’ ➤ ಎನ್‌ಕೌಂಟರ್ ತಂಡದ ಮುಖ್ಯಸ್ಥ ಕರ್ನಾಟಕದ ವಿಶ್ವನಾಥ್

(ನ್ಯೂಸ್ ಕಡಬ) newskadaba.com ಹೈದರಾಬಾದ್, ಡಿ.06. ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಪಶುವೈದ್ಯೆಯ ಅತ್ಯಾಚಾರಗೈದು ಜೀವಂತ ಸುಟ್ಟಿದ್ದ ಆರೋಪಿಗಳನ್ನು ಎನ್‌ಕೌಂಟರ್‌ ಮಾಡಲಾದ ತಂಡದ ಪೊಲೀಸ್ ಅಧಿಕಾರಿ ‘ವೀರ ಕನ್ನಡಿಗ’ ಇದೀಗ ಸಾರ್ವಜನಿಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಆರೋಪಿಗಳಾದ ಮೊಹಮ್ಮದ್ ಆರಿಫ್, ಜೊಲ್ಲಾ ನವೀನ್, ಜೊಲ್ಲಾ ಶಿವ ಮತ್ತು ಚಿಂತಕುಂಟಾ ಕೇಶವುಲು ಎಂಬವರನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದ ಪೊಲೀಸರು, ಶುಕ್ರವಾರ ಬೆಳಗ್ಗಿನ ಜಾವ ಮಹಜರು ನಡೆಸುವ ವೇಳೆ ಎನ್‌ಕೌಂಟರ್‌ ನಡೆಸಿದ್ದಾರೆ. ಹೈದರಾಬಾದ್ ಹೊರವಲಯದ ಷಾದ್ ನಗರದಲ್ಲಿ ಎನ್‌ಕೌಂಟರ್ ನಡೆದಿದ್ದು, ಎನ್‌ಕೌಂಟರ್‌ ಕಾರ್ಯಾಚರಣೆಯನ್ನು ಕರ್ನಾಟಕದ ‘ವೀರ ಕನ್ನಡಿಗ’ ಮೂಲತಃ ಗದಗ್ ಜಿಲ್ಲೆಯ ಐಪಿಎಸ್ ಅಧಿಕಾರಿ, ಸೈಬರಾಬಾದ್‌ ಪೊಲೀಸ್‌ ಆಯುಕ್ತ ವಿಶ್ವನಾಥ್ ಸಜ್ಜನ್ ನೇತೃತ್ವದ ತಂಡವು ವಹಿಸಿಕೊಂಡಿದೆ. ಇಂದು ಬೆಳಗ್ಗಿನ ಜಾವ ಕೊಲೆ ನಡೆದ ಜಾಗಕ್ಕೆ ಆರೋಪಿಗಳನ್ನು ಪೊಲೀಸರು ಮಹಜರಿಗೆ ಕರೆದೊಯ್ದಿದ್ದ ವೇಳೆ ಶಾದ್‌ನಗರದ ಚಟಾನ್‌ಪಲ್ಲಿ ಬ್ರಿಡ್ಜ್‌ ಮೇಲೆ ಆರೋಪಿಗಳು ಪರಾರಿಗೆ ಯತ್ನಿಸಿದ್ದಾರೆ ಎನ್ನಲಾಗಿದ್ದು, ಹೀಗಾಗಿ ನಾಲ್ವರು ಅತ್ಯಾಚಾರಿಗಳ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.

ಸದ್ಯ ಪಶುವೈದ್ಯೆಯ ಮೇಲಿನ ಈ ಭೀಕರ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಎನ್‌ಕೌಂಟರ್‌ ಮಾಡಿರುವುದಕ್ಕೆ ಸೈಬರಾಬಾದ್‌ ಪೊಲೀಸ್‌ ಆಯುಕ್ತ ವಿಶ್ವನಾಥ್ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಗಳ ಸುರಿಮಳೆಯೇ ವ್ಯಕ್ತವಾಗುತ್ತಿದೆ.

Scroll to Top